Ticker

6/recent/ticker-posts

ಗುದ್ದಿದ ಲಾರಿ, ವಿದ್ಯುತ್ ಕಂಬ ಧರೆಗೆ..!

ಮುಂಡಗೋಡ:ಅಡ್ಡಾದಿಡ್ಡಿ ಟ್ರಕ್ ಚಾಲನೆ ಮಾಡಿಕೊಂಡು, ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ವಿದ್ಯುತ್ ಕಂಬಗಳು ಮುರಿದುಬಿದ್ದ ಘಟನೆ ತಾಲೂಕಿನ ಇಂದೂರ ಗ್ರಾಮದ ಚರ್ಚ ಸಮೀಪ ರವಿವಾರ ರಾತ್ರಿ ಸಂಭವಿಸಿದೆ.


ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡಿದೆ. ಎದುರಿಗೆ ಬಂದ ವಾಹನಗಳ ಸವಾರರು ಹೆದರಿ ವಾಹನಗಳನ್ನು ರಸ್ತೆ ಬಿಟ್ಟು ಕೆಳಗಿಳಿಸಿದ್ದಾರೆ. ಕೆಲವರು ರಸ್ತೆ ಪಕ್ಕಕ್ಕೆ ಗಾಡಿ ನಿಲ್ಲಿಸಿ, ಚಾಲಕನಿಗೆ ಬೈಯುತ್ತಾ ಆತಂಕದಿಂದ ನೋಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.