Ticker

6/recent/ticker-posts

ಹೂಮಳೆ ಸುರಿಸಿ, ಮುಂದಿನ ಮುಖ್ಯಮಂತ್ರಿಗೆ ಜಯವಾಗಲಿ ಎಂದ ಕಾರ್ಯಕರ್ತರು..!

ಮುಂಡಗೋಡ:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಮುಂಡಗೋಡದ ಶಿವಾಜಿ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.


ಬುಧವಾರ ಸಂಜೆ ಶಿರಸಿಯಿಂದ ಆಗಮಿಸಿದ್ದ ಡಿಕೆಶಿ ಅವರು ಕಾರಿನಿಂದ ಹೊರಗೆ ಇಳಿಯುತ್ತಿದ್ದಂತೆ ಕಾರ್ಯಕರ್ತರ ಜಯಘೋಷಗಳು ಮುಗಿಲುಮುಟ್ಟಿದ್ದವು. ಪಟಾಕಿ ಸಿಡಿಸಿ ಜೈಕಾರ ಹಾಕಿದರು. ಒಂದು ಹಂತದಲ್ಲಿ ಕಾರ್ಯಕರ್ತರು ಅತಿ ಉತ್ಸಾಹದಿಂದ ಮುಂದಿನ ಮುಖ್ಯಮಂತ್ರಿ ಡಿಕೆಶಿ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.


ಆರತಿ ಬೆಳಗಿದರು, ಶಾಲು ಹೊದಿಸಿದರು..!

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹೂವಿನ ಸುರಿಮಳೆಗೈದರು. ಕಾರ್ಯಕರ್ತೆ ಶಾರದಾ ರಾಠೋಡ ಆರತಿ ಬೆಳಗಿ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಹಿರೇಹಳ್ಳಿ ಅವರು ಶಾಲು ಹೊದಿಸಿ, ಹಾರ ಹಾಕಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಮರಳಿ ಶಾಲು ಹಾಕಿದ ಡಿಕೆಶಿ, ಕೃಷ್ಣ ಹಿರೇಹಳ್ಳಿಯ ತಲೆ ಸವರಿ ಆಶೀರ್ವಾದ ಮಾಡಿದರು. 


ನೂಕುನುಗ್ಗಲು..!

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಎಲ್ಲೆ ಮೀರಿತ್ತು. ಕಾರಿನ ಬಾಗಿಲು ತೆಗೆಯುವುದರಿಂದ ಹಿಡಿದು, ಅವರಿಗೆ ಹಸ್ತಲಾಘವ ಮಾಡಿಕೊಳ್ಳಲು, ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಕಾರ್ಯಕರ್ತರು ದುಂಬಾಲು ಬಿದ್ದಿರುವ ದೃಶ್ಯ ಕಂಡುಬಂತು. ಕಾರ್ಯಕರ್ತರತ್ತ ಕೈ ಬೀಸಿ, ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದರು.