ಮುಂಡಗೋಡ:ಕಾತೂರ ಗ್ರಾಮ ಪಂಚಾಯತ ಪಿಡಿಓ ಆಗಿ ಕೆಲಸ ಮಾಡುತ್ತಿದ್ದ ಸಂತೋಷಸಿಂಗ್ ಅ. ಹಜೇರಿ(36) ಮಂಗಳವಾರ ನಿಧನರಾದರು. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
2015ರಲ್ಲಿ ಮುಂಡಗೋಡ ತಾಲೂಕಿನ ಇಂದೂರ ಗ್ರಾಮ ಪಂಚಾಯತದ ಪಿಡಿಓ ಆಗಿ ಸೇವೆ ಆರಂಭಿಸಿದ್ದರು. ನಂತರ ಚವಡಳ್ಳಿ ಗ್ರಾಮ ಪಂಚಾಯತಕ್ಕೆ ವರ್ಗವಾಗಿ ಕೆಲಸ ಮಾಡಿದ್ದರು. ಪಿಡಿಓ ಸಂತೋಷಸಿಂಗ್ ಹಜೇರಿ ನೀದನಕ್ಕೆ ತಾಲೂಕು ಪಂಚಾಯತದ ಇಒ ಪ್ರವೀಣ ಕಟ್ಟಿ, ಸಿಬ್ಬಂದಿ ಹಾಗೂ ತಾಲೂಕಿನ ಪಿಡಿಓಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು