Ticker

6/recent/ticker-posts

ಬೆಳೆ ಸಾಲದ ಚಿಂತೆ, ಕ್ರಿಮಿನಾಶಕ ಕುಡಿದು ಆತ್ಮಹತ್ಯೆ...!!

ಮುಂಡಗೋಡ:ಬೆಳೆಗಾಗಿ ಮಾಡಿದ್ದ ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮುಂಡಗೋಡ ತಾಲೂಕಿನ ಬಸಾಪುರ ಗ್ರಾಮದ ಗಂಗಾರಾಮಸಿಂಗ ಶಂಕರಸಿಂಗ ರಜಪೂತ(55) ಆತ್ಮಹತ್ಯೆ ಮಾಡಿಕೊಂಡ ರೈತ. 

ಬೆಳೆ ಬೆಳೆಯಲು ತನ್ನ ಹೆಸರಿನಲ್ಲಿ ಹಾಗೂ ಕುಟುಂಬದವರ ಹೆಸರಿನಲ್ಲಿ ಬ್ಯಾಂಕ್, ಸೊಸೈಟಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿದ್ದರಂತೆ. ಒಂದು ಕಡೆ ಬೆಳೆ ಸರಿಯಾಗಿ ಬರಲಿಲ್ಲ ಎಂಬ ಚಿಂತೆ, ಮತ್ತೊಂದು ಕಡೆ ಸಾಲ ಹೇಗೆ ತೀರಿಸುವುದು ಎಂಬ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದಾರೆ. ಶುಕ್ರವಾರ ರಾತ್ರಿ ತಮ್ಮ ಹೊಲದಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.