Ticker

6/recent/ticker-posts

ಮುಂಡಗೋಡದಲ್ಲಿ 9ಜನರು ಕೋವಿಡ್ ಸೋಂಕಿತರು..!!

ಮುಂಡಗೋಡ: ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಜುಲೈ 28ರ ವರೆಗೆ ಒಟ್ಟು 4016 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಇದರಲ್ಲಿ 3932 ಜನರು ಗುಣಮುಖರಾಗಿದ್ದಾರೆ.
ಬುಧವಾರ ಒಂದೂ ಪ್ರಕರಣ ಇಲ್ಲ..!
ತಾಲೂಕಿನಲ್ಲಿ ಬುಧವಾರ ಒಂದೇ ಒಂದು ಹೊಸದಾಗಿ ಕೊರೊನಾ ಪ್ರಕರಣ ದಾಖಲಾಗಿಲ್ಲ. ಆದರೆ ಇನ್ನೂ 9ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಅದರಲ್ಲಿ ಹೋಮ್ ಐಸೋಲೇಶನ್ ನಲ್ಲಿ 5ಜನರು ಹಾಗೂ ಟಿಬೆಟಿಯನ್ ಕ್ಯಾಂಪಿನ ಡಿಟಿಆರ್ ಆಸ್ಪತ್ರೆಯಲ್ಲಿ 04ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ಕೇರ್ ಖಾಲಿ..!
ಹೆಚ್ಚು ಕಡಿಮೆ ಒಂದು ತಿಂಗಳಿಂದ ಕೋವಿಡ್ ಕೇರ್ ಸೆಂಟರ್ ಖಾಲಿಯಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಮುಖಗೊಂಡಿರುವುದರಿಂದ ಕೋವಿಡ್ ಕೇರ್ ಸೆಂಟರ್ ಖಾಲಿಯಾಗಿದೆ.