Ticker

6/recent/ticker-posts

ಶಾಮಿಯಾನ ಹಾಕಲು ಹೋದವ ಹೆಣವಾದ...!!

ಮುಂಡಗೋಡ:ಮನೆಯ ಮುಂದೆ ಶಾಮಿಯಾನ ಹಾಕುತ್ತಿರುವಾಗ, ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ಪಟ್ಟಣದ ನೂರಾನಿಗಲ್ಲಿಯಲ್ಲಿ ರವಿವಾರ ಜರುಗಿದೆ.
ಕುಂದಗೋಳ ತಾಲೂಕಿನ ಹೊಸಕಟ್ಟಿ ಗ್ರಾಮದ ದೇವರಾಜ ಶಿವಾನಂದ ಶಿರಗುಪ್ಪಿ(19) ಮೃತ ದುರ್ದೈವಿ ಆಗಿದ್ದಾನೆ.
ಕಟ್ಟುವಾಗ ದುರಂತ:
ಮನೆಯ ಮುಂದೆ ಶಾಮಿಯಾನ ಹಾಕುವಾಗ, ಮನೆಯ ಸಂಪರ್ಕಕ್ಕೆ ಹಾಕಿರುವ ವಿದ್ಯುತ್ ತಂತಿ ಶಾಮಿಯಾನದ ಕಂಬದ ಮೂಲಕ ಪ್ರವಹಿಸಿದೆ. ಗೊತ್ತಿಲ್ಲದೇ ಕಂಬ ಹಿಡಿದಾಗ ಯುವಕನ ಮೈಗೆ ವಿದ್ಯುತ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ.
ರಕ್ಷಾ ಕವಚ ಇರಲಿಲ್ಲವಂತೆ:
ಶಾಮಿಯಾನ ಹಾಕುವಾಗ ವಿದ್ಯುತ್ ಸಂಪರ್ಕ ಇರುವ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲವಂತೆ. ಜೀವ ರಕ್ಷಾ ಸಾಧನಗಳನ್ನು ಸಹ ಕೊಟ್ಟಿರಲಿಲ್ಲ. ಶಾಮಿಯಾನ ಮಾಲೀಕ ಎಂ.ಕೆ.ಅಕ್ತರನ ನಿರ್ಲಕ್ಷ ಹಾಗೂ ಕೆಲಸಗಾರರಿಗೆ ಸರಿಯಾದ ಮಾರ್ಗದರ್ಶನ ನೀಡದಿರುವುದರಿಂದ ಇಂತಹ ಅವಘಡ ಸಂಭವಿಸಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.