Ticker

6/recent/ticker-posts

ಪಾದಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆರೋಪಿಯ ಬಂಧನ..!!

ಬನವಾಸಿ:ಪಾದಚಾರಿಗಳಿಗೆ ಡಿಕ್ಕಿ ಹೊಡೆದು, ಸ್ಥಳದಲ್ಲಿ ನಿಲ್ಲದೇ ಪರಾರಿಯಾಗಿದ್ದ ಬೊಲೆರೋ ವಾಹನದ ಚಾಲಕನನ್ನು ಬನವಾಸಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 18 ರಂದು 4 ಗಂಟೆಗೆ ಶಿರಸಿ-ಬನವಾಸಿ ರಸ್ತೆಯಲ್ಲಿ ಬೊಲೆರೋ ವಾಹನವು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾದ ಘಟನೆ ಜರುಗಿತ್ತು.
ಬೊಲೇರೊ ವಾಹನವು ಬಿಳಿ ಬಣ್ಣದ್ದಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಈ ಕುರಿತು ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಬೊಲೆರೋ ವಾಹನದ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿತನಾದ ಬನವಾಸಿಯ ಮಂಜುನಾಥ ರಾಮಾ ಮೋಗೆರ ಈತನನ್ನು ವಾಹನ ಸಮೇತ ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ, ಎಡಿಶನಲ್ ಎಸ್.ಪಿ. ಎಸ್. ಬದರಿನಾಥ, ಶಿರಸಿ ಡಿ.ವೈ.ಎಸ್.ಪಿ ರವಿ ನಾಯ್ಕ, ಶಿರಸಿ ಸಿ.ಪಿ.ಐ ರಾಮಚಂದ್ರ ನಾಯಕ ಅವರ ಮಾರ್ಗದರ್ಶನದಲ್ಲಿ ಬನವಾಸಿ ಪಿ.ಎಸ್.ಐ ಹನಮಂತ ಬಿರಾದಾರ, ಸಿಬ್ಬಂದಿ ಚಂದ್ರಪ್ಪ ಕೊರವರ, ವಿನಾಯಕ ನಾಯ್ಕ, ಮಂಜುನಾಥ ಬಿ., ಮಂಜುನಾಥ , ಚರಣ ನಾಯ್ಕ , ಶಿವರಾಜ್ ಎಸ್. ಅವರು ಆರೋಪಿಯನ್ನು ಬಂಧಿಸುವ ತಂಡದಲ್ಲಿದ್ದರು.