Ticker

6/recent/ticker-posts

ಉಚಿತ ಆಯುಷ್ ಆರೋಗ್ಯ ತಪಾಸಣಾ ಶಿಬಿರ..!

ಮುಂಡಗೋಡ:ಕೆನರಾಬ್ಯಾಂಕ್ ದೇಶಪಾಂಡೆ ಆರ್.ಸೆಟಿ, ಜಿಲ್ಲಾ ಪಂಚಾಯತ ಕಾರವಾರ, ಆಯುಷ್ ಇಲಾಖೆ, ಸರ್ಕಾರಿ ಆಯುರ್ವೇದಿಕ ಆಸ್ಪತ್ರೆ ಇವುಗಳ ಸಯುಕ್ತ ಆಶ್ರಯದಲ್ಲಿ ತಾಲೂಕಿನ ಕರಗಿನಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ, ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡ ದವರಿಗೆ 'ಉಚಿತ ಆಯುಷ್ ಅರೋಗ್ಯ ತಪಾಸಣಾ ಹಾಗು ಚಿಕಿತ್ಸಾ ಶಿಬಿರ' ನಡೆಯಿತು.
ಈ ಕಾರ್ಯಕ್ರಮವನ್ನು ಸಾಲಗಾಂವ ಗ್ರಾಮ ಪಂಚಾಯತ ಅಧ್ಯಕ್ಷೆ ನೇತ್ರಾ ಜಾಡರ ಉದ್ಘಾಟಿಸಿದರು. ಸರಕಾರಿ ಆಯುರ್ವೇದಿಕ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ಡಾ.ಸಂಜೀವ ಗಲಗಲಿ ಅವರು ಮಾತನಾಡಿ, ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯೋಜನೆಯಾಗಿದೆ. ಇಲಾಖೆಯು ನಿಮ್ಮ ಮನೆಯ ಅಂಗಳಕ್ಕೆ ಬಂದು ಶಿಬಿರ ಹಮ್ಮಿಕೊಂಡಿದ್ದು ಅದರ ಪ್ರಯೋಜನ ಪಡೆದುಕೊಳ್ಳಬೇಕು. ಕೋವಿಡ್ ವ್ಯಾಕ್ಸಿನ್ ಎಲ್ಲರೂ ಹಾಕಿಸಿಕೊಳ್ಳಬೇಕು ಎಂದರು.
ಸಿಬಿಡಿ ಆರ್.ಸೆಟಿಯ ಯೋಜನಾಧಿಕಾರಿ ಮಹಾಬಲೇಶ್ವರ ನಾಯ್ಕ ಮಾತನಾಡಿ, ಮುಂಡಗೋಡದ ಆಯುರ್ವೇದಿಕ ಆಸ್ಪತ್ರೆ ಉತ್ತಮವಾದ ಕೆಲಸ ಮಾಡುತ್ತಿದ್ದು ಸಾರ್ವಜನಿಕರು ಅದರ ಲಾಭ ಪಡೆದು ಕೊಳ್ಳಬೇಕು ಎಂದರು.
ಶಾಲೆಯ ಮುಖ್ಯಶಿಕ್ಷಕ ಡಿ.ಟಿ.ಲಮಾಣಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಿ. ಕೆ. ಹಳ್ಳಿಯ ಹಿರಿಯ ಆಯುರ್ವೇದಿಕ ವೈದ್ಯಾಧಿಕಾರಿ ಡಾ.ಶ್ರೀಕಾಂತ ಇಳಿಗೇರ, ಹಳಿಯಾಳದ ಆಯುರ್ವೇದಿಕ್ ವೈದ್ಯಾಧಿಕಾರಿ ಡಾ. ನವೀನ ಬಡಿಗೇರ,ಸಿಬಿಡಿ ಆರ್ ಸೆಟಿ ಮುಂಡಗೋಡದ ವಿನಾಯಕ ಸುಣಗಾರ ಉಪಸ್ಥಿತರಿದ್ದರು.
ರುಡ್ ಸೆಟ್ ಸಂಸ್ಥೆಯ ಫೀಲ್ಡ್ ಆಫೀಸರ್ ವಿಜಯಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಮಾ ಹಿರೇಮಠ ಸ್ವಾಗತಿಸಿದರು. ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಮತ್ತು ಆಯುರ್ವೇದ ಆಸ್ಪತ್ರೆಯ ಹೆಚ್ಚಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
358 ಕ್ಕೂ ಹೆಚ್ಚು ಜನ ಭಾಗವಹಿಸಿ ಮೆಡಿಸಿನಗಳನ್ನು ಪಡೆದರು.