Ticker

6/recent/ticker-posts

ದಾಂಡೇಲಿಯ ಕೋಗಿಲಬನ ಗ್ರಾಮದಲ್ಲಿ ಪ್ರತ್ಯಕ್ಷವಾದ ಮೊಸಳೆ.!!

ದಾಂಡೇಲಿಯ ಕಾಳಿ ನದಿಯ ಕೋಗಿಲಬನ ಗ್ರಾಮದ ಹತ್ತಿರವಿರುವ ಮೊಸಳೆ ಪಾರ್ಕ್ ನಿಂದ ಗುರುವಾರ ಬೆಳಗ್ಗೆ 7 ಘಂಟೆಯ ಹೊತ್ತಿಗೆ ಮೊಸಳೆಯೊಂದು ಊರಲ್ಲಿ ಬಂದಿದೆ. ಬೆಳಗ್ಗೆ ಜನ ವಾಯು ವಿವಾರಕ್ಕೆ ಹೋದಾಗ ಜನರ ಕಣ್ಣಿಗೆ ಬಿದ್ದಿದೆ. ಒಂದಿಷ್ಟು ಹೊತ್ತು ರಸ್ತೆಯಲ್ಲಿ ಓಡಾಟ ಮಾಡಿದ ಮೊಸಳೆಯ ಸುತ್ತ ಮುತ್ತ ಜನರು ಸೇರಿಕೊಂಡು ಫೋಟೋ ಮತ್ತು ವಿಡಿಯೋಗಳನ್ನ ತೆಗೆದುಕೊಂಡಿದ್ದಾರೆ. ಕೆಲವರು ಜನ ಭಯಭೀತರಾಗಿ ತಮ್ಮ ಮನೆಯ ಗೇಟು ಮತ್ತು  ಬಾಗಿಲುಗಳನ್ನ ಮುಚ್ಚಿಕೊಂಡಿದ್ದಾರೆ. ನಂತರ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರ್ಧ ಗಂಟೆ ಕಾಲ ಮೊಸಳೆಯು ರಾಜಾರೋಷವಾಗಿ ಗಲ್ಲಿಯಲ್ಲಿ ತಿರುಗಾಡುತ್ತ ಜನರಲ್ಲಿ ಮನರಂಜನೆಯ ಜೊತೆ ಆತಂಕದ ವಾತಾವರಣ ನಿರ್ಮಿಸಿತ್ತು.
ಅರಣ್ಯ ಇಲಾಖೆಯವರು ಬರುವ ಮೊದಲೇ ಮೊಸಳೆ ಬಂದ ಜಾಗದಲ್ಲಿಯೇ,  ಮೊಸಳೆ ಪಾರ್ಕ್ ಗೆ ಮರಳಿದೆ. ದಾಂಡೇಲಿ ನಿವಾಸಿಗಳಿಗೆ ಇದೇನು ಹೊಸದಲ್ಲ.  ಈ ಮೊದಲೂ ಸಹ ಚಿಕ್ಕ ಪುಟ್ಟ ಮೊಸಳೆಗಳು ರಸ್ತೆಯ ಪಕ್ಕ ಬ್ರಿಡ್ಜ್ ಮೇಲೆ ಕಾಣ ಸಿಗುತ್ತವೆ ,ಆದರೆ ಇಂದು ಬೆಳಗ್ಗೆ ಬಂದ ಮೊಸಳೆ ದೊಡ್ಡ ಗಾತ್ರದಲ್ಲಿತ್ತು ಹಾಗೂ ಗಲ್ಲಿಯೊಳಗೆ ಬಂದಿದ್ದು  ಜನರಲ್ಲಿ ಆತಂಕ ಮೂಡಿಸಿತ್ತು ಎಂದು ಸ್ಥಳೀಯ ನಿವಾಸಿ ರಾಹುಲ್ ಲೋಕಂಡೆ ನ್ಯೂಸ್ @ ಮುಂಡಗೋಡಿಗೆ ಮಾಹಿತಿ ನೀಡಿದರು.