ಇದು ಸ್ವಲ್ಪ nostalagic ಬರಹ, ನಿಮ್ಮ ಬಾಲ್ಯ ನೆನಪಾಗಬಹುದು! ಮಗು ಹುಟ್ಟುವಾಗ ಅಳುವ ಧ್ವನಿಯಲ್ಲೇ ಸಂಗೀತವಿದೆ.ಹೂ ಅರಳುವಾಗ, ನದಿ ಹರಿಯುವಾಗ ಹೀಗೆ ಪ್ರಕೃತಿಯ ಕಣ ಕಣವೂ ಸಂಗೀತವೇ!
ಅದಕ್ಕೆ ಸಂಗೀತಕ್ಕೆ ಅಂತಹ ಪ್ರಾಶಸ್ತ್ಯವನ್ನು ನೀಡಿ ಅದೊಂದು ಮೋಕ್ಷ ಸಾಧನೆಗೆ ಹಾದಿಯಾಗಬಲ್ಲ ವಿದ್ಯೆಯೆಂದು ನಾವು ಗೌರವಿಸುತ್ತೇವೆ.
ನವು ಹುಟ್ಟಿದಾಗ ನಾನಂತೂ 90 ರ ದಶಕದ ಸಂಗೀತದ ಆಸ್ವಾದಕ, ಎಷ್ಟು ರಸವತ್ತಾಗಿತ್ತು ಆ ಕಾಲ "ನಗುವ ನಯನ" ಎಂದು ರೆಡಿಯೋ ಉಲಿದಾಗ ಆಗುವ ರೋಮಾಂಚನ ಇದೆಯಲ್ಲ ಅದು ಯಾವ ಸುಖದ ತುಲನೆಗೂ ಸಾಧ್ಯವಾಗದು!
ದರ್ಬಾರಿ ಕಾನಡಾದಲ್ಲಿ ಯಾವುದೇ ಹಾಡು ಬಂದರೂ ಕನ್ನಡದವರು ಅದನ್ನು ತಮ್ಮದೆಂದು ಒಪ್ಪಿಕೊಳ್ಳುತ್ತಾರಂತೆ, ಅದರಲ್ಲಂತೂ ರಾಗಧಾರೆಯನ್ನೇ ಹರಿಸಿಬಿಟ್ಟರು ಸಿನಿಮಾದವರು. "ಒಲವೇ ಮೌನವೇ"ಯಂತಹ ಹಾಡುಗಳು ನಮಗಾದರೆ "ರಾಧಿಕೆ ನಿನ್ನ ಸರಸವಿದೇಕೆ" ಹಳಬರಿಗಾಯಿತು.
ನಂತರದಲ್ಲಿ ಬಂದ ಮನೋಮೂರ್ತಿಯವರ ಅಮೇರಿಕಾ ಅಮೇರಿಕಾದ ಹಾಡುಗಳು ಯಾವ ರೀತಿ ತಟ್ಟಿಬಿಟ್ಟವೆಂದರೆ
ಎದೆಯ ಗೂಡಿನ ಎಲ್ಲ ಕವಾಟಗಳು ನೋವಿನಿಂದ ಬಳಲುವ ಹಾಗೆ ಮಾಡಿದ ಹಾಡೇ "ಯಾವ ಮೋಹನ ಮುರುಳಿ ಕರೆಯಿತೋ" ಈಗಲೂ ಎಷ್ಟೊಂದು ಜನ ಅದನ್ನು ಇಷ್ಟ ಪಡುತ್ತಾರೆ.
ಭಾವ ಸಂಗಮದ ಆ ಭಾವಗೀತೆಗಳ ರಸಾಮೃತವನ್ನು ಯಾರು ಸವೆದಿದ್ದೀರಿ?
ರತ್ನಮಾಲಾ ಪ್ರಕಾರರ ಧ್ವನಿಯಲ್ಲಿ ಅಶ್ವತ್ಥ್, ಮೈಸೂರು ಅನಂತಸ್ವಾಮಿಯವರ ಸಂಯೋಜನೆಯಲ್ಲಿ "ಯಾವ ಮೋಹನ ಮುರುಳಿ ಕರೆಯಿತೋ", "ಎಲ್ಲಿ ಜಾರಿತೋ ಮನವು", "ದೀಪವು ನಿನ್ನದೇ", "ಎದೆ ತುಂಬಿ ಹಾಡಿದೆನು" ,
"ರಾಯರು ಬಂದರು", "ಹಕ್ಕಿಯ ಹಾಡಿಗೆ", "ಮತ್ತದೆ ಬೇಸರ" ಈ ಹಾಡುಗಳನ್ನು ಕೇಳಿ ಭಾವೋನ್ಮಾದ ಉಕ್ಕಿ ಅಳದವರ್ಯಾರು?
ಅಂದು ದೀಪಕ ರಾಗದಲ್ಲಿ ವಿಕ್ರಮ ಅವಲೊತ್ತಿಕೊಂಡಾಗ ಶನೈಶ್ವರ ಒಲಿದ, ತಿಲಂಗ ರಾಗದಲ್ಲಿ ಹಾಡಿದರೆ ಆಂಜನೇಯ ಮನೆಗೆ ಬರುವನಂತೆ!
ಎಷ್ಟೊಂದು ಶಕ್ತಿಯಲ್ಲವೇ ಈ ಸಂಗೀತಕ್ಕೆ!
ಭೀಮಸೇನ್ ಜೋಷಿಯವರು ಕುಳಿತು "ಭಾಗ್ಯದ ಲಕ್ಷ್ಮೀ ಬಾರಮ್ಮ" ಎಂದು ಶುಭಪಂತರುವಾಳಿ/ ತೋಡಿ ರಾಗದಲ್ಲಿ ಆಲಾಪಿಸಿದರೆಂದರೆ ಅತೀ ಚಂಚಲೆಯಾದ ಅವಳು ಕುಳಿತು
ಕೇಳುತ್ತಿದ್ದಳೇನೋ!
ಹಾನಗಲ್ ಕುಮಾರ್ ಸ್ವಾಮಿಯವರಂತಹ ಶ್ರೀಗಳು ಕಾದು ಬೆಳಿಸಿದ ಪಂಚಾಕ್ಷರಿ ಗವಾಯಿಯವರಂತಹ ಸಂಗೀತ ನಿಧಿಯೊಂದು ಭೀಕರ ಬರವಿರುವ ಊರಿಗೆ ಹೋಗಿ "ಮೇಘ ಮಲ್ಹಾರ" ದಲ್ಲಿ ಹಾಡಿದಾಗ ಧೋ ಎಂದು ಮಳೆ ಸುರಿದತಂತೆ.
ಎಂತಹ ಮಾರಣಾಂತಿಕ ಖಾಯಿಲೆಗೊಳಾದವರೂ ಕೂಡ ತಮ್ಮ ಕೊನೆ ಘಳಿಗೆಯಲ್ಲಿ ತಮ್ಮ ಜೀವಮಾನವನ್ನು ಚೂರು ಹಿಗ್ಗಿಸಲು ನೆಮ್ಮದಿಯಾಗಿರುವುದಕ್ಕೆ ಸಂಗೀತವನ್ನು ಬಳಸಿಕೊಳ್ಳುತ್ತಾರೆ ಅಷ್ಟೇ ಅಲ್ಲ ಎಷ್ಟೋ ಜನರು ಮಾನಸಿಕವಾಗಿ ನೊಂದಾಗ ಸಂಗೀತವನ್ನು ಔಷಧಿಯಾಗಿ ಸ್ವೀಕರಿಸುತ್ತಾರೆ. ಇಷ್ಟೆಲ್ಲ ಖುಷಿ ಕೊಡುವ ಸಂಗೀತವು ಹಂಸ ರಾಗದಲ್ಲಿ ಸಂತೋಷವನ್ನೂ ಹಂಸನಂದಿಯಲ್ಲಿ ದುಃಖವನ್ನೂ ಉಂಟುಮಾಡಬಲ್ಲದಂತೆ! ನಾವು ತಾಳಿ ಕಟ್ಟುವಾಗಲೂ ಆನಂದಿ ರಾಗದಲ್ಲಿ ಶಹನಾಯಿ ನುಡಿದಾಗಲೇ ಆನಂದ! ಇಂತಹ ವಿರಾಟ್ ಶಕ್ತಿಗೆ ನಮಸ್ಕಾರ.🙏
ಅಂಕಣ - ನಿಖಿಲ್ ಎ ಬಿ
ಮುಂಡಗೋಡ.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು