Ticker

6/recent/ticker-posts

ಯಲ್ಲಾಪುರ ಪೊಲೀಸರ ಕಾರ್ಯಾಚರಣೆ..! ಅಂತರ್‌ಜಿಲ್ಲಾ ಕಳ್ಳರ ಬಂಧನ..!!

ಯಲ್ಲಾಪುರ:ಆರು ತಿಂಗಳ ಹಿಂದೆ ಯಲ್ಲಾಪುರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಬೇಧಿಸಿರುವ, ಪೊಲೀಸರು ಅಂತರಜಿಲ್ಲಾ ಕಳ್ಳನನ್ನು ಹಾಗೂ ಮತ್ತೊಬ್ಬ ಅಪ್ರಾಪ್ತನನ್ನು(ಕಾನೂನು ಸಂಘರ್ಷಕ್ಕೆ ಒಳಗಾದವ) ರವಿವಾರ ಬಂಧಿಸಿದ್ದಾರೆ.

ಧಾರವಾಡದ ಲಕ್ಷ್ಮಿಸಿಂಗನಕೇರಿಯ ಹುಲಗಪ್ಪ @ ಹುಲಗೇಶ ತಂದೆ ಹನಮಂತ ಬಂಡಿವಡ್ಡರ(32 ವರ್ಷ) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 42 ಗ್ರಾಂ ತೂಕದ ಬಂಗಾರದ ಆಭರಣಗಳಾದ ಹಾಗೂ 100 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ಅಂದಾಜು 2.20 ಲಕ್ಷ ರೂಪಾಯಿ ಆಗಿದೆ.


ಕಳ್ಳತನ ಎಲ್ಲಿ ನಡೆದಿತ್ತು..? 

ಯಲ್ಲಾಪುರದ ಶಾರದಾಗಲ್ಲಿಯಲ್ಲಿರುವ ಚಂದ್ರಶೇಖರ ಹೆಗಡೆ ಎಂಬುವರ ಮನೆಯನ್ನು ಕಳೆದ ವರ್ಷ ಡಿಸೆಂಬರ್ 18ರಂದು ಕಳ್ಳತನ ಮಾಡಿದ್ದರು. ಮನೆಯ ಬಾಗಿಲ ಬೀಗವನ್ನು  ಒಡೆದು ಬೆಡ್‌ರೂಮ್‌ನ ಗೊದ್ರೆಜ್ ಕಪಾಟಿನಲ್ಲಿದ್ದ  ಬೆಳ್ಳಿ ಮತ್ತು ಬಂಗಾರದ ಆಭರಣ ಕಳ್ಳತನ ಮಾಡಿದ್ದರು. ಈ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ   ಪ್ರಕರಣ ದಾಖಲಾಗಿತ್ತು.

ಈತ ಅಂತರಜಿಲ್ಲಾ ಕಳ್ಳ..! 

ಬಂಧಿತ ಆರೋಪಿ ಹುಲಗಪ್ಪ @ ಹುಲಗೇಶ ತಂದೆ ಹನಮಂತ ಬಂಡಿವಡ್ಡರ(32 ವರ್ಷ) ಈತ ಉತ್ತರ ಕನ್ನಡ ಜಿಲ್ಲೆಯ ಕಾರವಾರ ,ಯಲ್ಲಾಮರ , ಭಟ್ಕಳ , ಸಿದ್ದಾಪುರ, ಶಿವಮೊಗ್ಗ ಜಿಲ್ಲೆಯ ಸೊರಬ , ಆನವಟ್ಟಿ,  ಧಾರವಾಡ ಜಿಲ್ಲೆಯ ಕಲಘಟಗಿ , ಹುಬ್ಬಳ್ಳಿ , ಕಡೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೆ ಕಳೆದ 3-4 ವರ್ಷಗಳಲ್ಲಿ ಯಲ್ಲಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಕಳ್ಳತನ ಮತ್ತು ಬ್ಯಾಂಕ ಕಳ್ಳತನವನ್ನು ಮಾಡಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಮುಖ ಆರೋಪಿ ಬಂಧನಕ್ಕೆ ಬಲೆ..!

ಅಂತರಜಿಲ್ಲಾ ಕಳ್ಳತನ ಪ್ರಕರಣಗಳಲ್ಲಿ ಪ್ರಮುಖ ಆರೋಪಿತನೊಬ್ಬನು ಪಾಲ್ಗೊಂಡಿರುವುದು ಬಂಧಿತ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಸದ್ಯ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ..

ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು..!

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು  ಬದರಿನಾಥ, ಶಿರಸಿ ಡಿ.ವೈ.ಎಸ್.ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ , ಯಲ್ಲಾಪುರ ಸಿಪಿಐ ಸುರೇಶ ಯಳ್ಳೂರ ಇವರ ನೇತ್ರತ್ವದಲ್ಲಿ, ಪಿ.ಎಸ್.ಐ ಮಂಜುನಾಥ ಗೌಡರ, ಪ್ರೊಬೆಷನರಿ ಪಿಎಸ್‌ಐ ಮುಷಾಹಿದ್ ಅಹ್ಮದ್  ಹಾಗೂ ಸಿಬ್ಬಂದಿಯವರಾದ ಮಹ್ಮದ ಶಫೀ , ಬಸವರಾಜ ಹಗರಿ , ಗಜಾನನ ನಾಯ್ಕ , ನಾಗಪ್ಪ ಲಮಾಣಿ , ವಿನೋದಕುಮಾರ ರೆಡ್ಡಿ , ಬಸವರಾಜ ಡಿ.ಕೆ , ಚನ್ನಕೇಶವ , ಅಮರ, ಗಿರೀಶ ಲಮಾಣಿ , ನಂದೇಶ್ವರ ಗೂಡ್ಡೋಡಗಿ , ಚಿದಂಬರ ಅಂಗಡಿ , ವಿಜಯ ಜಾಧವ , ಶೋಭಾ ನಾಯ್ಕ , ಚಾಲಕರಾದ ಕೃಷ್ಣ ಮಾತ್ರೋಡಿ  ಹಾಗೂ ಕಾರವಾರದ ಅಪರಾಧ ವಿಭಾಗದ ಸಿಬ್ಬಂದಿಗಳಾದ ದೇವರಾಜ ಮತ್ತು ರಾಜೇಶ ನಾಯಕ ಪೊಲೀಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.