ಮುಂಡಗೋಡ:ಕಳೆದ ಎರಡು ತಿಂಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತ, ಕಳೆದ ಒಂದು ವಾರದಿಂದ ಇಳಿಕೆಯತ್ತ ಸಾಗಿತ್ತು. ಶುಕ್ರವಾರ ಪ್ರಕಟವಾದ ಬುಲೆಟಿನ್ಸ್ ಪ್ರಕಾರ, ಮುಂಡಗೋಡ ತಾಲೂಕಿನಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಈ ಮೂಲಕ ಕೋರೊನಾ ಸೋಂಕಿತರ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.
ಮುಂಡಗೋಡ ತಾಲೂಕಿನಲ್ಲಿ ಜೂನ.18 ರವರೆಗೆ ಒಟ್ಟು 105 ಸಕ್ರೀಯ ಪ್ರಕರಣಗಳಿವೆ. ಇದರಲ್ಲಿ 41 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 64 ಜನರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಇಲ್ಲಿಯವರೆಗೆ 3925 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 3749 ಜನರು ಗುಣಮುಖರಾಗಿದ್ದಾರೆ.
ಕೊರೊನಾದಿಂದ ಇಬ್ಬರ ಸಾವು:ಕೊರೊನಾದಿಂದ ಇಲ್ಲಿಯವರೆಗೆ 70 ಜನರು ಮೃತಪಟ್ಟಿದ್ದಾರೆ. ಶುಕ್ರವಾರ ಟಿಬೇಟಿಯನ್ ಕಾಲೋನಿಯ 80 ವರ್ಷದ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ. ಅದೇ ರೀತಿ ಮುಂಡಗೋಡ ಹಳೂರ ಓಣಿಯ 65 ವರ್ಷದ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು