ಮುಂಡಗೋಡ:ಹೊಟ್ಟೆ ನೋವು ತಾಳಲಾರದೇ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು, ಯುವಕನೊಬ್ಬ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಜರುಗಿದೆ.
ಮುಂಡಗೋಡ ಪಟ್ಟಣದ ಗಣೇಶ ನಗರದ ನಿವಾಸಿ ಬಸವರಾಜ ಬಾಲಪ್ಪ ಗೌಳಿ(36) ನೇಣಿಗೆ ಶರಣಾದ ಯುವಕನಾಗಿದ್ದಾನೆ.
ಎಂದಿನಂತೆ ಎಮ್ಮೆಗಳನ್ನು ಮೇಯಿಸಲು ಹೋದ ಬಸವರಾಜ, ಜೀವನದಲ್ಲಿ ಜಿಗುಪ್ಸೆ ಹೊಂದಿ, ಪಟ್ಟಣದ ಹೊರವಲಯದಲ್ಲಿರುವ ಶುಂಠಿ ತೊಳೆಯುವ ಯಂತ್ರದ ಪಕ್ಕದ ಅರಣ್ಯದಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ಸಂಜೆಯಾದರೂ ಮನೆಗೆ ಬಾರದಿದ್ದಾಗ, ಮನೆಯವರು ಎಲ್ಲ ಕಡೆ ಹುಡುಕಿದ್ದಾರೆ. ಆದರೆ ಮಂಗಳವಾರ ಬೆಳಿಗ್ಗೆ ಅರಣ್ಯದಲ್ಲಿ ಶವ ನೇತಾಡುತ್ತಿರುವುದು ಕಂಡುಬಂದಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು