Ticker

6/recent/ticker-posts

ಎಂಟು ಆರೋಪಿಗಳ ಬಂಧನ..! 18 ಪ್ರಕರಣಗಳ ಬೇಧಿಸಿದ ಪೊಲೀಸರು..!!

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಂಕೋಲಾ ಮತ್ತು ಕಾರವಾರ ತಾಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಮನೆಗೆ ಕನ್ನ ಹಾಕಿ, ಕಳ್ಳತನ ಮಾಡುತ್ತಿದ್ದ 07 ಜನ ಆರೋಪಿತರನ್ನು ಹಾಗೂ  ಕಳುವಿನ ಮಾಲನ್ನು ಸ್ವೀಕರಿಸುವ ವ್ಯಕ್ತಿ ಸೇರಿದಂತೆ ಒಟ್ಟು ಎಂಟು ಜನರನ್ನು ಕುಮಟಾ ಸಿ.ಪಿ.ಐ ಶಿವಪ್ರಕಾಶ ನಾಯ್ಕ ಅವರ ನೇತೃತ್ವದಲ್ಲಿ ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.


ಕಳ್ಳರನ್ನು ಬಂಧಿಸುವ ಮೂಲಕ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 5 ಪ್ರಕರಣಗಳು, ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ 11 ಪ್ರಕರಣಗಳು ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳು ಸೇರಿದಂತೆ ಒಟ್ಟೂ 18 ಕಳ್ಳತನ ಪ್ರಕರಣಗಳನ್ನು ಭೇಧಿಸಿದಂತಾಗಿದೆ.

ಬಂಧಿತ ಆರೋಪಿತರಿಂದ ಕಳ್ಳತನ ಮಾಡಿದ 351 ಗ್ರಾಂ ಬಂಗಾರದ ಆಭರಣಗಳು, ಒಂದು ಕೆ.ಜಿ ಬೆಳ್ಳಿಯ ಆಭರಣ, 5 ಗ್ಯಾಸ್ ಸಿಲೆಂಡರಗಳು , ಒಂದು ಏರ್ ಗನ್, 3 ಮೋಟಾರ್ ಸೈಕಲ್ ಹಾಗೂ 8 ಮೊಬೈಲ್ ಪೋನ್ ಗಳೂ ಸೇರಿದಂತೆ ಒಟ್ಟೂ 19 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 



ಬಂಧಿತ ಆರೋಪಿಗಳು..!

ಅಂಕೋಲಾ ತಾಲೂಕಿನ  ಬಬ್ರುವಾಡದ ಪ್ರಶಾಂತ್ ಕಿಶೋರ ನಾಯ್ಕ(23),  ತೆಂಕಣಕೇರಿಯ ಹರ್ಷಾ ನಾಗೇಂದ್ರ ನಾಯ್ಕ(22), ಶಿರಕುಳಿಯ ಗಣೇಶ ಮಾರುತಿ ನಾಯ್ಕ(24),  ಕೇಣಿಯ ರಾಹುಲ್ ಕೃಷ್ಣಾನಂದ ಬಂಟ್ (22), ಶಿರಸಿ ತಾಲೂಕಿನ ಕಸ್ತೂರಬಾ ನಗರದ ಶ್ರೀಕಾಂತ್ ಗಣಪತಿ ದೇವಾಡಿಗ(27),   ನಿಹಾಲ ಗೋಪಾಲಕೃಷ್ಣ ದೇವಳಿ(26), ಲಂಡಕನಳ್ಳಿಯ ಸಂದೀಪ ಹನುಮಂತ ಮರಾಠೆ( 25) ಬನವಾಸಿ ರಸ್ತೆಯ ಅಶೋಕ ಗಣಪತಿ ರಾಯ್ಕರ(42) (ಕಳುವಿನ ಮಾಲು ಸ್ವೀಕಾರದಲ್ಲಿ ಆರೋಪಿತ) ಬಂಧಿತ ಆರೋಪಿಗಳಾಗಿದ್ದಾರೆ.


ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು: 

ಈ ಕಾರ್ಯಾಚರಣೆಯಲ್ಲಿ ಭಟ್ಕಳ ಉಪ ವಿಭಾಗದ ಡಿ.ವೈ.ಎಸ್.ಪಿ  ಬೆಳ್ಳಿಯಪ್ಪ ಕೆ.ಯು,  ಕುಮಟಾ ವೃತ್ತ ನಿರೀಕ್ಷಕ ಶಿವಪ್ರಕಾಶ .ಆರ್. ನಾಯ್ಕ, ಗೋಕರ್ಣ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ್ .ಎಸ್. ನಾಯ್ಕ, ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರವೀಣಕುಮಾರ್, ಪೊಲೀಸ್ ಸಿಬ್ಬಂದಿಯವರಾದ ರಾಜೇಶ ಹೆಚ್ ನಾಯ್ಕ, ಸಚಿನ್ ಜಿ ನಾಯ್ಕ, ಗೋರಕನಾಥ ರಾಣೆ, ಕಿರಣಕುಮಾರ್ ಬಾಳೂರ, ನಾಗರಾಜ ಪಟಗಾರ, ರಾಜು ನಾಯ್ಕ, ಅರುಣ ನಾಯ್ಕ, ನಾಗರಾಜ ನಾಯ್ಕ, ಎ.ಎಸ್.ಐ ಅರವಿಂದ ಶೆಟ್ಟಿ, ಎ.ಎಸ್.ಐ ನಾರಾಯಣ ಗುನಗಿ, ಎ.ಎಸ್.ಐ ರಾಜು .ಜೆ ಆಗೇರ, ವಿನಯ ಗೌಡ, ಜಗದೀಶ ನಾಯಕ, ಅನುರಾಜ ನಾಯ್ಕ, ಸಂಜೀವ ನಾಯ್ಕ, ಅರುಣ ಮುಕ್ಕಣ್ಣನವರ, ಶಿವಾನಂದ ಗೌಡ, ಅಮಿತ ಸಾವಂತ್, ವಸಂತ ನಾಯ್ಕ, ರವಿ ಹಾಡಕರ, ಮಹೇಶ ನಾಯ್ಕ, ರಾಮಯ್ಯ ನಾಯ್ಕ, ರಾಜು ಮಾಳಿ, ಉದಯ ತಾಂಡೇಲ ಮತ್ತು ಅಂಕೋಲಾ ಪೊಲೀಸ್ ಠಾಣೆಯ ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕೆ ಹಾಗೂ ತಾಂತ್ರಿಕ ವಿಭಾಗ, ಜಿಲ್ಲಾ ಪೊಲೀಸ್ ಕಚೇರಿಯ ರಮೇಶ ನಾಯ್ಕ, ಸುಧೀರ ಮಡಿವಾಳ ರವರು ಪಾಲ್ಗೊಂಡಿದ್ದ್ರರು.   

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೆಲಸವನ್ನು ಮೆಚ್ಚಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು  ಅವರು ಬಹುಮಾನ ಘೋಷಿಸಿದ್ದಾರೆ.