ಮುಂಡಗೋಡ:ಶೇಂಗಾ ಬೆಳೆಗೆ ಖರ್ಚು ಮಾಡಿದ ಹಣ ಬರದಿರುವುದನ್ನೇ ಮನಸ್ಸಿಗೆ ಹಚ್ಚಿಕೊಂಡು ಹಾಗೂ ಕೃಷಿಗಾಗಿ ವಿವಿಧ ಸೊಸೈಟಿಗಳಲ್ಲಿ ಮಾಡಿರುವ ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದ ರೈತನೊಬ್ಬ ಅರಣ್ಯದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅರಿಶಿಣಗೇರಿ ಗ್ರಾಮದಲ್ಲಿ ಶನಿವಾರ ಜರುಗಿದೆ.
ದೇವೀಂದ್ರಪ್ಪ ಈರಪ್ಪ ತೆಗ್ಗಳ್ಳಿ(60) ನೇಣಿಗೆ ಶರಣಾದ ರೈತನಾಗಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು