Ticker

6/recent/ticker-posts

ಮುಂಡಗೋಡ ತಾಲೂಕಿನಲ್ಲಿ 23700 ಜನರಿಗೆ ಕೊರೊನಾ ಲಸಿಕೆ

ಮುಂಡಗೋಡ:ಕೋವಿಡ್ ಲಸಿಕೆ ಪಡೆಯುವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಲಸಿಕೆಗಾಗಿ ಜನರಿಂದ ಹೆಚ್ಚಿನ ಬೇಡಿಕೆ ಸಹ ವ್ಯಕ್ತವಾಗುತ್ತಿದೆ. ಸದ್ಯ ಆದ್ಯತಾ ವಲಯದಲ್ಲಿ ಗುರುತಿಸಿರುವ ಜನರಿಗೆ ಹಾಗೂ 45 ಮತ್ತು 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗುತ್ತಿದೆ.


18-44 ವರ್ಷ ಒಳಗಿನವರಿಗೆ ಆನ್‍ಲೈನ್ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ನೋಂದಣಿ ಮಾಡಿಸಿಕೊಂಡವರಿಗೆ ನಿಗದಿಪಡಿಸಿದ ದಿನದಂದು ಕೊರೊನಾ ಲಸಿಕೆ ಹಾಕಲಾಗುತ್ತದೆ. 

ಮುಂಡಗೋಡ ತಾಲೂಕಿನಲ್ಲಿ ಜೂನ.14ರ ವರೆಗೆ ಒಟ್ಟು 23700 ಜನರು ಕೊರೊನಾ ಲಸಿಕೆ ಪಡೆದಿದ್ದಾರೆ. ಇದರಲ್ಲಿ 18819 ಜನರು ಮೊದಲನೇ ಡೋಸ್ ಪಡೆದವರಾಗಿದ್ದಾರೆ. 4881 ಜನರು ಮಾತ್ರ ಎರಡೂ ಡೋಸ್ ಗಳನ್ನು ಪಡೆದಿದ್ದಾರೆ. ಸೋಮವಾರ ಒಟ್ಟು 225 ಜನರು ಕೊರೊನಾ ಲಸಿಕೆ ಪಡೆದಿದ್ದಾರೆ.