Ticker

6/recent/ticker-posts

ಎಲೆಕ್ಟ್ರಿಷಿಯನ್, ಪ್ಲಂಬರ್, ದಿನಪತ್ರಿಕೆ ಎಜೆನ್ಸಿ ಹಾಗೂ ವಿತರಣಾ ಸಿಬ್ಬಂದಿಗೆ ಕೋವಿಡ್ ಲಸಿಕೆ

ಮುಂಡಗೋಡ:18-44 ವರ್ಷ ಒಳಗಿನ ಆದ್ಯತಾ ಗುಂಪುಗಳನ್ನು ಗುರುತಿಸಿ, ಈಗಾಗಲೇ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ಕೆಲವು ಆದ್ಯತಾ ಗುಂಪುಗಳನ್ನು ಸೇರಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿಧೇಶಕರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಪರಿಷ್ಕøತ ಆದೇಶದಂತೆ, ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಕೈಗಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು(ಎನ್.ಪಿ.ಸಿ.ಐ.ಎಲ್), ನೇವಲ್ ಬೇಸ್ ಸಿವಿಲಿಯನ್ ಗಳು, ಮಂಗಳಮುಖಿಯರು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲೈಂಗಿಕ ಕಾರ್ಯಕರ್ತರು, ಜೈನ ಸಾಧು ಮತ್ತು ಸಾದ್ವಿಯರು, ಕ್ಷೌರಿಕ ಸಮುದಾಯ (ಕರ್ನಾಟಕ ರಾಜ್ಯ ಸವಿತಾ ಸಮಾಜ) ಮತ್ತು ಬ್ಯೂಟಿ ಪಾರ್ಲರನ ಸಿಬ್ಬಂದಿಗಳು, ಎಲೆಕ್ಟ್ರಿಷಿಯನ್ ಗಳು ಮತ್ತು ಪ್ಲಂಬರ್ ಗಳು, ದಿನಪತ್ರಿಕೆಯ ಏಜೆನ್ಸಿಯವರು ಮತ್ತು ದಿನಪತ್ರಿಕೆ ವಿತರಣಾ ಸಿಬ್ಬಂದಿ, ಖಾಸಗಿ ವೈದ್ಯಕೀಯ ಪ್ರತಿನಿಧಿಗಳು ಕೋವಿಡ್ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.