Ticker

6/recent/ticker-posts

ಕೋವಿಡ್-19 ಲಸಿಕಾ ಮೇಳಕ್ಕೆ ಚಾಲನೆ...!ಒಟ್ಟು 2910 ಜನರು ಸೋಮವಾರ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ..!!

 ಮುಂಡಗೋಡ:18-44 ವರ್ಷ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ಹಾಕಿಸುವ, ಲಸಿಕಾ ಮೇಳಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಸೋಮವಾರ ಚಾಲನೆ ನೀಡಿದರು.

ಜಿಲ್ಲಾ ಪಂಚಾಯತಿ ಸದಸ್ಯ ಎಲ್.ಟಿ.ಪಾಟೀಲ, ತಹಶೀಲ್ದಾರ್ ಶ್ರೀಧರ ಮುಂದಲಮನಿ, ತಾಲೂಕು ಆಸ್ಪತ್ರೆಯ ಆಳಿತಾಧಿಕಾರಿ ಡಾ.ಎಚ್.ಎಫ್.ಇಂಗಳೆ, ಶ್ರೀಶೈಲ ಪಟ್ಟಣಶೆಟ್ಟಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಯಾವ ಕೇಂದ್ರಗಳಲ್ಲಿ ಎಷ್ಟು ಲಸಿಕೆಯಿದೆ:

ಜೂನ 21ರಂದು ತಾಲೂಕಿನ ವಿವಿಧೆಡೆ ಕೋವಿಡ್-19 ಲಸಿಕಾ ಮೇಳ ನಡೆಯುತ್ತಿದೆ. ಯಾವ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಷ್ಟು ಡೋಸ್ ಲಸಿಕೆ ಲಭ್ಯವಿದೆ ಎಂಬುದನ್ನು ತಹಶೀಲ್ದಾರ್ ಶ್ರೀಧರ ಮುಂದಲಮನಿ ಮಾಹಿತಿ ನೀಡಿದ್ದಾರೆ.

18-44 ವರ್ಷ ಒಳಗಿನವರಿಗೆ ಒಟ್ಟು 1000 ಡೋಸ್ ಲಭ್ಯವಿದೆ. 45 ವರ್ಷ ಮೇಲ್ಪಟ್ಟವರಿಗೆ 1910 ಡೋಸ್ ಲಭ್ಯವಿದೆ. ಒಟ್ಟು 2910 ಜನರು ಸೋಮವಾರ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ.


 ಎಲ್ಲೆಲ್ಲಿ ಎಷ್ಟು ಡೋಸ್ ಲಭ್ಯವಿದೆ

  18-44 ವರ್ಷ       45ವರ್ಷ ಮೇಲ್ಪಟ್ಟವರು

1)ಮುಂಡಗೋಡ ತಾಲೂಕು ಆಸ್ಪತ್ರೆ     50            180

ಲಮಾಣಿ ತಾಂಡಾ, ಕಂಬಾರಗಟ್ಟಿ ಪ್ಲಾಟ್,   

ನ್ಯಾಸರ್ಗಿ, ಕಲಕೇರಿ                            50            100

2)ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರ, 

ಅಗಡಿ, ನಂದಿಕಟ್ಟಾ, ಕೆಂದಲಗೇರಿ, ಪ್ರಾಥಮಿಕ   

ಆರೋಗ್ಯ ಕೇಂದ್ರ ಮಳಗಿ, ಪಾಳಾ, 

ಬೆಡಸಗಾಂವ್, ಕೋಡಂಬಿ                      50              80

3)ಕಾತೂರ ಪಿ.ಎಚ್.ಸಿ, ನಾಗನೂರ, ಚಿಪಗೇರಿ,    50            100

ಓಣಿಕೇರಿ, ಚಿಗಳ್ಳಿ, 

4) ಸಾಲಗಾಂವ                                             50            90