ಮುಂಡಗೋಡ:ಕೊರೊನಾ ಲಸಿಕಾಕರಣವನ್ನು ಹೆಚ್ಚಿಸುವ ಉದ್ದೇಶದಿಂದ ಹಾಗೂ ಎಲ್ಲರಿಗೂ ಲಸಿಕೆ ಹಾಕಿಸಿ, ಕೊರೊನಾ ಸೋಂಕಿನಿಂದ ರಕ್ಷಿಸುವ ಸಲುವಾಗಿ, ಜೂನ.21ರಂದು ಮುಂಡಗೋಡದಲ್ಲಿ 'ಕೋವಿಡ್-19 ಲಸಿಕಾ ಮೇಳ' ವನ್ನು ಆಯೋಜಿಸಲಾಗಿದೆ.
ಸಂಗನಬಸಯ್ಯ,ಪಟ್ಟಣ ಪಂಚಾಯತ ಮುಖ್ಯಾಧಿಕಾರಿ
ಮೇಳದಲ್ಲಿ ಯಾರಿಗೆ ಲಸಿಕೆವಿದೆ?:
45-60 ವರ್ಷ ಒಳಗಿನ ಎಲ್ಲರೂ, 18 ವರ್ಷ ಮೇಲ್ಪಟ್ಟು ಹಾಗೂ 44 ವರ್ಷದ ಒಳಗಿನವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬಹುದು. ಇನ್ನೂ, ಕೂಲಿ ಕಾರ್ಮಿಕರು, ಅಂಗಡಿಕಾರರು ಹಾಗೂ ಅಂಗಡಿಯಲ್ಲಿ ಕೆಲಸನಿರ್ವಹಿಸುತ್ತಿರುವ ಕೆಲಸಗಾರರು, ಹೊಟೇಲಗಳಲ್ಲಿ ಕೆಲಸ ನಿರ್ವಹಿಸುತ್ತಿರುವರು, ಪೆಟ್ರೋಲ್ ಬಂಕನಲ್ಲಿ ಕೆಲಸ ಮಾಡುವರು, ಬೀದಿ ವ್ಯಾಪಾರಸ್ಥರಿಗೂ ಲಸಿಕೆ ಹಾಕಲಾಗುವುದು
ಲಸಿಕಾ ಕೇಂದ್ರ ಎಲ್ಲಿವೆ?:
ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿ, ತಾಲೂಕಾ ಆರೋಗ್ಯ ಕೇಂದ್ರ, ಸುಭಾಷನಗರ, ಕಂಬಾರಗಟ್ಟಿ ಪ್ಲಾಟ್ ನಲ್ಲಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬಹುದು ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ತಿಳಿಸಿದ್ದಾರೆ.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು