Ticker

6/recent/ticker-posts

7 ಜನರಿಗೆ ಕೊರೊನಾ ಪಾಸಿಟಿವ್..!!ಕೋವಿಡ್ ಸೆಂಟರನಲ್ಲಿ ಒಬ್ಬರು ಮಾತ್ರ!!


ಮುಂಡಗೋಡ:ಕೊರೊನಾ ಸೋಂಕಿತರ ಸಂಖ್ಯೆ ಸ್ಥಿರಗೊಳ್ಳುತ್ತಿದ್ದು, ಕಳೆದ ಒಂದು ವಾರದಿಂದ ಹತ್ತರ ಒಳಗೆ ಪ್ರಕರಣಗಳು ದಾಖಲಾಗುತ್ತಿವೆ. ಬುಧವಾರ ತಾಲೂಕಿನ 7 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. 

ಇದರೊಂದಿಗೆ, ಇಲ್ಲಿಯವರೆಗೆ ಮುಂಡಗೋಡ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3957ಕ್ಕೆ ಏರಿಕೆ ಆಗಿದೆ. ಇದರಲ್ಲಿ 3796 ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಸದ್ಯ 88 ಜನರು ಕೊರೊನಾದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಮನೆಯಲ್ಲಿದ್ದವರು 52 ಜನರಾದರೇ, ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವರು 35 ಜನರು. ಕೋವಿಡ್ ಕೇರ್ ಸೆಂಟರನಲ್ಲಿ ಒಬ್ಬರು ಮಾತ್ರ ದಾಖಲಾಗಿದ್ದಾರೆ!