ಮುಂಡಗೋಡ:ಮುಂಡಗೋಡ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಗುರುವಾರ ಪ್ರಕಟವಾದ ಬುಲೆಟಿನ್ಸನಲ್ಲಿ ಎಂಟು ಜನರಿಗೆ ಮಾತ್ರ ಕೊರೊನಾ ಪಾಸಿಟಿವ್ ಬಂದಿದೆ.
ಪಟ್ಟಣದಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ವಿವೇಕಾನಂದ ನಗರ ಹಾಗೂ ಗಾಂಧಿನಗರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಇನ್ನುಳಿದಂತೆ ಗ್ರಾಮೀಣ ಭಾಗದ ಬಸನಾಳ ಗ್ರಾಮದಲ್ಲಿ 2 ಜನರಿಗೆ, ತಮ್ಯಾನಕೊಪ್ಪ ಗ್ರಾಮದ ಇಬ್ಬರಿಗೆ ಹಾಗೂ ಇಂದೂರ ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಮುಂಡಗೋಡ ತಾಲೂಕಿನ ಇಂದೂರ ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರಿ ಸೊಸೈಟಿ ವತಿಯಿಂದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು
ಇಲ್ಲಿಯವರೆಗೆ ಎಷ್ಟು ಜನರಿಗೆ ಪಾಸಿಟಿವ್?:
ಮುಂಡಗೋಡ ತಾಲೂಕಿನಲ್ಲಿ ಜೂನ.16ರ ವರೆಗೆ ಒಟ್ಟು 3914 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅದರಲ್ಲಿ 3716 ಜನರು ಗುಣಮುಖರಾಗಿದ್ದಾರೆ. ಇನ್ನೂ 131 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 67 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.
ಸದ್ಯ 87 ಜನರು ಹೋಂ ಐಸೋಲೆಷನ್ ನಲ್ಲಿದ್ದರೇ, 44 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸತತ ಮೂರನೇ ದಿನವೂ ಕೋವಿಡ್ ಕೇರ್ ಸೆಂಟರನಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗದಿರುವುದರಿಂದ, ಕೋವಿಡ್ ಸೆಂಟರ ಖಾಲಿಯಿದೆ.
ಲಸಿಕೆ ಪಡೆದವರು:
ಕೊರೊನಾ ಲಸಿಕೆ ಪಡೆಯಲು ಜನರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಜೂನ.16 ರವರೆಗೆ ಒಟ್ಟು 23916 ಜನರು ಕೊರೊನಾ ಲಸಿಕೆ ಪಡೆದಿದ್ದಾರೆ. ಅದರಲ್ಲಿ 18986 ಜನರು ಮೊದಲ ಡೋಸ್ ಪಡೆದವರಿದ್ದು, ಎರಡೂ ಡೋಸ್ ಗಳನ್ನು ಪಡೆದವರು 4930 ಜನರು ಮಾತ್ರ.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು