Ticker

6/recent/ticker-posts

ಮುಂಡಗೋಡ ತಾಲೂಕಿನಲ್ಲಿ ಕೊರೊನಾದಿಂದ ಇಬ್ಬರ ಸಾವು..ಹದಿಮೂರು ಜನರು ಗುಣಮುಖ..

ಮುಂಡಗೋಡ:ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ರವಿವಾರ ಮೃತಪಟ್ಟಿದ್ದಾರೆ. ತಟ್ಟಿಹಳ್ಳ ಗ್ರಾಮದ 65 ವರ್ಷದ ವ್ಯಕ್ತಿ ಹಾಗೂ ಮುಂಡಗೋಡ ಪಟ್ಟಣದ ಆನಂದನಗರದ ನಿವಾಸಿ 45 ವರ್ಷದ ಮಹಿಳೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಇಲ್ಲಿಯವರೆಗೆ 73 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. 


ರವಿವಾರ 5ಜನರಿಗೆ ಸೋಂಕು:

ಮುಂಡಗೋಡ ತಾಲೂಕಿನಲ್ಲಿ 5 ಜನರಿಗೆ ಕೊರೊನಾ ಸೋಮಕು ತಗುಲಿದೆ. ಟಿಬೇಟಿಯನ್ ಕಾಲೋನಿಯಲ್ಲಿ 3 ಜನರಿಗೆ ಕೊರೊನಾ ಸೋಂಕು ತಗುಲಿದೆ. ಪಾಳಾ ಗ್ರಾಮದಲ್ಲಿ ಒಬ್ಬರಿಗೆ ಹಾಗೂ ಮುಂಡಗೋಡದ ಕಂಬಾರಗಟ್ಟಿ ಪ್ಲಾಟ್ ನಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.

84 ಸಕ್ರೀಯ ಪ್ರಕರಣಗಳು:

ಮುಂಡಗೋಡ ತಾಲೂಕಿನಲ್ಲಿ ಜೂನ.20ರವರೆಗೆ 84 ಕೊರೊನಾ ಸಕ್ರೀಯ ಪ್ರಕರಣಗಳಿವೆ. ಹೋಮ ಐಸೋಲೇಷನ್ ನಲ್ಲಿ 41 ಜನರು ಹಾಗೂ ಆಸ್ಪತ್ರೆಗಳಲ್ಲಿ 43 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿವಾರ 13 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ.