ಮುಂಡಗೋಡ:ಕೋರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ರವಿವಾರದ ಬುಲೆಟಿನ್ಸ್ ನಲ್ಲಿ, ತಾಲೂಕಿನ 21 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಮುಂಡಗೋಡ ಪಟ್ಟಣದಲ್ಲಿ ನಾಲ್ಕು ಜನರಿಗೆ ಪಾಸಿಟಿವ್ ಬಂದಿದ್ದು, ಉಳಿದ 17 ಜನರು ಗ್ರಾಮೀಣ ಭಾಗದವರಿದ್ದಾರೆ. ಪಟ್ಟಣದ ತಹಶೀಲ್ದಾರ್ ಕ್ವಾಟರ್ಸ್ ನಲ್ಲಿ 2 ಜನರಿಗೆ, ಬಸವನಬೀದಿ ಹಾಗೂ ಹೊಸ ಓಣಿಯಲ್ಲಿ ತಲಾ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಇನ್ನೂ, ಗ್ರಾಮೀಣ ಭಾಗದಲ್ಲಿ ನೀಡುವುದಾದರೆ, ಮಳಗಿ ಸಮೀಪದ ಜನಗೇರಿ ಗ್ರಾಮದಲ್ಲಿ 9 ಜನರಿಗೆ ಪಾಸಿಟಿವ್ ಬಂದಿದೆ. ಮಳಗಿಯ ಸಿದ್ಧಾಪುರ ಓಣಿಯ 2 ಜನರಿಗೆ, ಟಬೇಟಿಯನ್ ಕಾಲೋನಿಯಲ್ಲಿ 3 ಜನರಿಗೆ, ಕೊಳಗಿ, ಹುಲಿಹೊಂಡ ಹಾಗೂ ಅಂದಲಗಿ ಗ್ರಾಮದಲ್ಲಿ ತಲಾ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು