Ticker

6/recent/ticker-posts

ಇಂದು 19 ಜನರು ಕೊರೊನಾದಿಂದ ಗುಣಮುಖ! ಲಕ್ಕೋಳ್ಳಿ ಗ್ರಾಮದಲ್ಲಿ ಒಂದು ಸಾವು..!!

ಮುಂಡಗೋಡ:ಕೊರೊನಾ ಸೋಂಕಿಗೆ ಒಳಗಾಗಿದ್ದ 19 ಜನರು ಶನಿವಾರ ಗುಣಮುಖರಾಗಿದ್ದಾರೆ. ಲಕ್ಕೊಳ್ಳಿ ಗ್ರಾಮದಲ್ಲಿ 70 ವರ್ಷದ ಮಹಿಳೆಯೊಬ್ಬರು, ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.


ಮತ್ತೆ 9 ಜನರಿಗೆ ಸೋಂಕು:

ಮುಂಡಗೋಡ ತಾಲೂಕಿನಲ್ಲಿ ಶನಿವಾರ 9 ಜನರಿಗೆ ಕೊರೊನಾ ಸೋಂಕು ತಗುಲಿದೆ. ಸದ್ಯ 94 ಸಕ್ರೀಯ ಪ್ರಕರಣಗಳಿವೆ. ಇದರಲ್ಲಿ 53 ಜನರು ಹೋಂ ಐಸೋಲೇಷನ್ ನಲ್ಲಿ ಇದ್ದರೆ, 41 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು 3933 ಜನರು:

ಮುಂಡಗೋಡ ತಾಲೂಕಿನಲ್ಲಿ ಜೂನ 19ರ ವರೆಗೆ ಒಟ್ಟು 3933 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 3768 ಜನರು ಗುಣಮುಖರಾಗಿದ್ದಾರೆ. ಕೊರೊನಾದಿಂದ ಒಟ್ಟು 71 ಜನರು ಮೃತಪಟ್ಟಿದ್ದಾರೆ.