ಮುಂಡಗೋಡ:ತಾಲೂಕಿನಲ್ಲಿ ಮಂಗಳವಾರ 30 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದರಲ್ಲಿ ನ್ಯಾಸರ್ಗಿ ಕಾಲೋನಿಯಲ್ಲಿ ಅತಿ ಹೆಚ್ಚು 12 ಜನರಿಗೆ ಕೋವಿಡ್ ಸೋಂಕು ತಗುಲಿದೆ.
ಇನ್ನುಳಿದಂತೆ ಕೊಪ್ಪ ಇಂದಿರಾನಗರದಲ್ಲಿ 5 ಜನರಿಗೆ, ಕಾತೂರ ಗ್ರಾಮದಲ್ಲಿ 4 ಜನರಿಗೆ ಹಾಗೂ ನಂದಿಕಟ್ಟಾ, ಉಗ್ಗಿನಕೇರಿ, ಹುನಗುಂದ ಗ್ರಾಮದಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.
ಮುಂಡಗೋಡ ಪಟ್ಟಣದಲ್ಲಿ ಬುಧವಾರ ಒಟ್ಟು 6 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಇದರಲ್ಲಿ ಗಾಂಧಿನಗರದ 4 ಜನರು ಹಾಗೂ ಹುಬ್ಬಳ್ಳಿ ರಸ್ತೆ, ಹೊಸ ಓಣಿಯಲ್ಲಿ ತಲಾ ಒಬ್ಬರಿಗೆ ಕೋವಿಡ್ ಖಚಿತಗೊಂಡಿದೆ.
ಜೂನ.2ರ ವರೆಗೆ ಮುಂಡಗೋಡ ತಾಲೂಕಿನಲ್ಲಿ ಕೋವಿಡ್ ನಿಂದ ಸೋಂಕಿತರಾದವರು ಹಾಗೂ ಗುಣಮುಖರಾದವರ ಮಾಹಿತಿ ಈ ಕೆಳಗಿನಂತಿದೆ.
ಕೊರೊನಾದಿಂದ ಒಟ್ಟು 3646 ಜನರು ಸೋಂಕಿತರಾಗಿದ್ದರು. ಅದರಲ್ಲಿ 3176 ಜನರು ಗುಣಮುಖರಾಗಿದ್ದಾರೆ. ಇನ್ನೂ ಎರಡನೇ ಅಲೆಯಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿದ್ದು, ಇಲ್ಲಿಯವರೆಗೆ ಒಟ್ಟು 60ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಸದ್ಯ 410 ಸಕ್ರಿಯ ಪ್ರಕರಣಗಳಿವೆ.
ಇದರಲ್ಲಿ 252 ಜನರು ಮನೆಯಲ್ಲಿಯೇ ಇದ್ದು ಗುಣಮುಖರಾಗುತ್ತಿದ್ದಾರೆ. 44 ಜನರು ಕೋವಿಡ್ ಕೇರ್ ಸೆಂಟರನಲ್ಲಿದ್ದಾರೆ. 114 ಜನರು ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು