Ticker

6/recent/ticker-posts

11 ಜನರಿಗೆ ಕೊರೊನಾ ಪಾಸಿಟಿವ್! ಖಾಲಿಯಾದ ಕೋವಿಡ್ ಸೆಂಟರ್!!

ಮುಂಡಗೋಡ:ಕೊರೊನಾ ಸೊಂಕಿತರ ಸಂಖ್ಯೆ ದಿನೇ ದಿನೇ ಇಳಿಮುಖದತ್ತ ಸಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.


ಸೋಮವಾರ ಪ್ರಕಟಗೊಂಡ ಕೋವಿಡ್ ಬುಲೆಟಿನ್ಸ ಪ್ರಕಾರ, ಮುಂಡಗೋಡ ತಾಲೂಕಿನಲ್ಲಿ 11 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅದರಲ್ಲಿ 5 ಜನರು ಪಟ್ಟಣದವರಾಗಿದ್ದರೇ, ಇನ್ನುಳಿದವರು ಗ್ರಾಮೀಣ ಭಾಗದವರಿದ್ದಾರೆ. 

ಪಟ್ಟಣದಲ್ಲಿ ಕಿಲ್ಲೆ ಓಣಿಯಲ್ಲಿ 4 ಜನರಿಗೆ, ತಹಶೀಲ್ದಾರ್ ಕಚೇರಿಯ ಒಬ್ಬ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಗ್ರಾಮೀಣ ಭಾಗದಲ್ಲಿ ನೋಡುವುದಾದರೆ, ಮಳಗಿ ಸಮೀಪದ ಜನಗೇರಿ ಯಲ್ಲಿ 3 ಜನರಿಗೆ, ಗುಂಜಾವತಿ, ಶಿಂಗನಳ್ಳಿ, ಸಾಲಗಾಂವ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. 

ಇಲ್ಲಿಯವರೆಗೆ ಎಷ್ಟು ಪ್ರಕರಣ?:ಮುಂಡಗೋಡ ತಾಲೂಕಿನಲ್ಲಿ ಜೂನ.14ರ ವರೆಗೆ ಒಟ್ಟು 3878 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಲ್ಲಿ 3676ಜನರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 67 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಸದ್ಯ 135 ಸಕ್ರೀಯ ಪ್ರಕರಣಗಳಿದ್ದು, ಹೋಂ ಐಸೋಲೇಷನ್ ನಲ್ಲಿ 97 ಜನರು ಹಾಗೂ ವಿವಿಧ ಆಸ್ಪತ್ರೆಗಳಲ್ಲಿ 38 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಿಂಗಳ ಬಳಿಕ ಖಾಲಿ:ಒಂದು ತಿಂಗಳ ಹಿಂದೆ ಆರಂಭಿಸಲಾಗಿದ್ದ ಪಟ್ಟಣದ ಕೋವಿಡ್ ಕೇರ್ ಸೆಂಟರನಲ್ಲಿ ಜೂನ.14ರಂದು ಹೊಸ ದಾಖಲಾತಿ ಯಾವುದೇ ಆಗಿಲ್ಲ. ಅಲ್ಲದೇ ಇದಕ್ಕಿಂತ ಮುಂಚೆ ಇದ್ದವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರಿಂದ ಕೋವಿಡ್ ಕೆರ್ ಸೆಂಟರನಲ್ಲಿ ಸೋಮವಾರ ಕೊರೊನಾ ಸೋಂಕಿತರು ಯಾರೂ ಇಲ್ಲ.