Ticker

6/recent/ticker-posts

ಮುಂಡಗೋಡ ತಾಲೂಕಿನಲ್ಲಿ 14 ಜನರಿಗೆ ಕೊರೊನಾ ಪಾಸಿಟಿವ್!

ಮುಂಡಗೋಡ:ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಇಳಿಮುಖದ ಹಾದಿಯಲ್ಲಿ ಸಾಗಿದೆ. ತಾಲೂಕಿನಲ್ಲಿ ವರದಿಯಾದ ಪ್ರಕರಣಗಳನ್ನು ಗಮನಿಸಿದಾಗ,  ಈ ವಾರದಲ್ಲಿ 20-25ರ ಆಸುಪಾಸಿನಲ್ಲಿಯೇ ಕೊರೊನಾ ಪ್ರಕರಣಗಳು  ವರದಿಯಾಗಿವೆ.


ಶುಕ್ರವಾರ ಪ್ರಕರಟಗೊಂಡ ಕೊವಿಡ್ ಬುಲೆಟಿನ್ಸನಲ್ಲಿ ತಾಲೂಕಿನ 14 ಜನರಿಗೆ ಮಾತ್ರ, ಕೊರೊನಾ ಸೋಂಕು ತಗುಲಿದೆ. ಇದರಲ್ಲಿ ಮುಂಡಗೋಡ ಪಟ್ಟಣದ 4 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಗಾಂಧಿನಗರ, ಹೊಸ ಓಣಿ, ನೆಹರುನಗರ, ತಹಶೀಲ್ದಾರ್ ಕ್ವಾಟರ್ಸ್ ನಲ್ಲಿ ತಲಾ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಇನ್ನೂ ಗ್ರಾಮಿಣ ಭಾಗದಲ್ಲಿ ನೋಡುವುದಾದರೆ, ಚವಡಳ್ಳಿ ಗ್ರಾಮದಲ್ಲಿ 4ಜನರಿಗೆ, ಕೊಳಗಿ ಗ್ರಾಮದಲ್ಲಿ 3 ಜನರಿಗೆ ಹಾಗೂ ಜನಗೇರಿ, ಕವಲಗಿ, ಇಂದೂರ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.