ಮುಂಡಗೋಡ:ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬುಧವಾರವೂ ಇಳಿಮುಖ ಆಗಿದ್ದು, ತಾಲೂಕಿನಲ್ಲಿ 18 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಸೋಂಕು ಕಾಣಿಸಿಕೊಂಡವರಲ್ಲಿ 9 ಜನರು ಟಿಬೇಟಿಯನ್ ಕ್ಯಾಂಪಿನಲ್ಲಿದ್ದರೇ, ತಮ್ಯಾನಕೊಪ್ಪ ಗ್ರಾಮದಲ್ಲಿ 7 ಜನರಿಗೆ, ತಟ್ಟಿಹಳ್ಳಿ ಗ್ರಾಮದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪಟ್ಟಣದಲ್ಲಿ ಹೊಸದಾಗಿ ಸೋಂಕಿತರ ಸಂಖ್ಯೆ ದಾಖಲಾಗಿಲ್ಲ.
ಒಟ್ಟು ಸೋಂಕಿತರು:ಜೂನ 9ರ ವರೆಗೆ ಮುಂಡಗೋಡ ತಾಲೂಕಿನಲ್ಲಿ 3805 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 3554 ಜನರು ಗುಣಮುಖರಾಗಿದ್ದಾರೆ. ಕೊರೊನಾದಿಂದ ಒಟ್ಟು 66 ಜನರು ಮೃತಪಟ್ಟಿದ್ದಾರೆ. ಒಟ್ಟು 151 ಜನರು ಹೋಂ ಐಸೋಲೇಷನ್‌ನಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 39 ಜನರು ಹಾಗೂ ಕೋವಿಡ್ ಕೇರ್ ಸೆಂಟರ್‌ನಲ್ಲಿ ಇಬ್ಬರು ದಾಖಲಾಗಿದ್ದಾರೆ. ಸದ್ಯ ಮುಂಡಗೋಡ ತಾಲೂಕಿನಲ್ಲಿ 203 ಸಕ್ರೀಯ ಪ್ರಕರಣಗಳಿವೆ.
ಕೋವಿಡ್ ಲಸಿಕೆ ಪಡೆದವರು:ಮುಂಡಗೋಡ ತಾಲೂಕಿನಲ್ಲಿ ಜೂನ.9 ರವರೆಗೆ ಒಟ್ಟು 22558 ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. ಅದರಲ್ಲಿ 4817 ಜನರು ಮಾತ್ರ ಎರಡೂ ಡೋಸ್ ಪಡೆದವರಿದ್ದಾರೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು