Ticker

6/recent/ticker-posts

ಛತ್ರಪತಿ ಶಿವಾಜಿ ಕ್ರೆಡಿಟ್ ಸೊಸೈಟಿಯಿಂದ ಕೋವಿಡ್ ಪ್ರೋಟೆಕ್ಷನ್ ಕಿಟ್ ವಿತರಣೆ

ಮುಂಡಗೋಡ:ಪಟ್ಟಣದಲ್ಲಿರುವ ಛತ್ರಪತಿ ಶಿವಾಜಿ ಕೋ.ಅಪರೇಟಿವ್ ಕ್ರೆಡಿಟ್ ಸೊಸ್ಶೆಟಿಯವರು, ಕೊರೊನಾ ಸಮಯದಲ್ಲಿ ಹಳ್ಳಿಗಳಲ್ಲಿ ಜನಸೇವೆ ಮಾಡುತ್ತಿರುವ, ಆರೋಗ್ಯ ಸಿಬ್ಬಂದಿಗೆ ಕೋವಿಡ್ ಪ್ರೊಟೆಕ್ಷನ್ ಕಿಟ್ ಗಳನ್ನು ಬುಧವಾರ ನೀಡಿದರು.


ತಾಲೂಕಿನ ನಂದಿಕಟ್ಟಾ, ಮೈನಳ್ಳಿ, ಚವಡಳ್ಳಿ ಹಾಗೂ ಚಿಗಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಕೋವಿಡ್ ಪ್ರೊಟೆಕ್ಷನ್ ಕಿಟ್ ಗಳನ್ನು ನೀಡಿದರು. 


ಹಳ್ಳಿಗಳಲ್ಲಿ ಹಗಲಿರುಳು ಕೆಲಸ ಮಾಡುತ್ತಿರುವ ನರ್ಸಗಳಿಗೆ, ಶಿವಾಜಿ ಸೊಸ್ಶೆಟಿಯ ಆಡಳಿತ ಮಂಡಳಿವರು ಕೋವಿಡ್ ಪ್ರೊಟೆಕ್ಷನ್ ಕಿಟ್ ನೀಡಲು ನಿರ್ದರಿಸಿದ್ದರು. ಅದರಂತೆ ಬುಧವಾರ ನಾಲ್ಕೂ ಪಂಚಾಯತಗಳಲ್ಲಿ ಕೆಲಸ ಮಾಡುವ ನರ್ಸಗಳಿಗೆ ಕಿಟ್ ನೀಡಲಾಯಿತು ಎಂದು ಶಿವಾಜಿ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗರಾಜ ಬೆಣ್ಣಿ ಹೇಳಿದರು.

ಪ್ರೊಟೆಕ್ಷನ್ ಕಿಟ್ ನಲ್ಲಿ ಆಕ್ಸಿಜನ್ ಸ್ಯಾಚುರೇಶನ್ ಲೆವೆಲ್ ಚೆಕಪ್ ಮಷಿನ್, ಬ್ಲಡ್ ಪ್ರೆಸ್ಸರ್ ಚೆಕಪ್ ಸಾಧನ, ಥರ್ಮಲ್ ಸ್ಕ್ಯಾನರ್, ಗ್ಲುಕೋಮೀಟರ್, ಬ್ಲಡ್ ಗ್ಲುಕೋಸ್ ಟೆಸ್ಟ ಸ್ಟ್ರಿಪ್ಸ್‍ಗಳಿವೆ ಎಂದು ನಾಗರಾಜ ಬೆಣ್ಣಿ ಹೇಳಿದರು. 

ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಸೊಸೈಟಿ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.