ಮುಂಡಗೋಡ:ಕೊರೊನಾ ಮತ್ತೆ ಏರಿಳಿತ ಆಗುತ್ತಿದ್ದು, ಬುಧವಾರ ಪ್ರಕಟವಾದ ಬುಲೆಟಿನ್ಸ ಪ್ರಕಾರ, ಮುಂಡಗೋಡ ತಾಲೂಕಿನಲ್ಲಿ 29 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಟಿಬೇಟಿಯನ್ ಕಾಲೋನಿಯಲ್ಲಿ ಬರೋಬ್ಬರಿ 14 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ ಕೆಲವು ದಿನಗಳಿಂದ ಟಿಬೇಟಿಯನ್ ಕಾಲೋನಿಯಲ್ಲಿ ಕಡಿಮೆಯಾಗುತ್ತಿದ್ದ ಪ್ರಕರಣಗಳು, ಈಗ ಮತ್ತೆ ಏರಿಕೆ ಕಂಡಂತಾಗಿದೆ.
ಮುಂಡಗೋಡ ಪಟ್ಟಣದಲ್ಲಿ 3 ಜನರಿಗೆ ಕೊರೊನಾ ದೃಢಪಟ್ಟಿದೆ. ಹೊಸ ಓಣಿ, ಆನಂದನಗರ, ಸುಭಾಷ್ ನಗರದಲ್ಲಿ ತಲಾ ಒಬ್ಬರಿಗೆ ಪಾಸಿಟಿವ್ ಬಂದಿದೆ.
ಇನ್ನೂ ಗ್ರಾಮೀಣ ಭಾಗದಲ್ಲಿ ನೋಡುವುದಾದರೆ, ಮೈನಳ್ಳಿ 3, ತಮ್ಯಾನಕೊಪ್ಪ 2, ತೇಗಿನಕೊಪ್ಪ 2, ಯರೇಬೈಲ್ 2, ಬಸಾಪುರ 2, ಹರಗನಹಳ್ಳಿ ಗ್ರಾಮದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕೋವಿಡ್ ಸೆಂಟರ್ ಖಾಲಿ:ಮುಂಡಗೋಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಸತಿ ಗೃಹದಲ್ಲಿ ಒಂದು ತಿಂಗಳ ಹಿಂದೆ ಆರಂಭಿಸಲಾಗಿದ್ದ, ಕೋವಿಡ್ ಕೇರ್ ಸೆಂಟರ್, ಸದ್ಯ ಖಾಲಿ ಆಗಿದೆ. ಎರಡು ದಿನಗಳಿಂದ ಕೊರೊನಾ ಸೋಂಕಿತರು, ಹೊಸದಾಗಿ ಯಾರೂ ದಾಖಲಾಗುತ್ತಿಲ್ಲ. ಇದರಿಂದ ಕೋವಿಡ್ ಕೇರ್ ಸೆಂಟರ್ ಸದ್ಯಕ್ಕೆ ಸೋಂಕಿತರಿಲ್ಲದೇ ಭಣಗುಡುತ್ತಿದೆ.


ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು