Ticker

6/recent/ticker-posts

ಎಂಟು ಜನರಿಗೆ ಕೊರೊನಾ ಪಾಸಿಟಿವ್!

ಮುಂಡಗೋಡ:ಕೊರೊನಾ ಸೋಂಕು ಖಚಿತಗೊಳ್ಳುವರ ಸಂಖ್ಯೆಯಲ್ಲಿ ಇಳಿಮುಖದ ಹಾದಿ ಮುಂದುವರೆದಿದೆ. ಮೇ ತಿಂಗಳಲ್ಲಿ ಅಬ್ಬರಿಸಿದ್ದ ಕೊರೊನಾ, ಜೂನ ಮೂರನೇ ವಾರದಲ್ಲಿ ಇಳಿಮುಖದ ಹಾದಿಯನ್ನು ಹಿಡಿದಿರುವುದು ಕೆಲವು ದಿನಗಳ ಅಂಕಿ ಅಂಶಗಳಿಂದ ಕಂಡುಬರುತ್ತಿದೆ.


ಮಂಗಳವಾರ ಪ್ರಕಟವಾದ ಕೊರೊನಾ ಬುಲೆಟಿನ್ಸ್ ಪ್ರಕಾರ, ಮುಂಡಗೋಡ ತಾಲೂಕಿನಲ್ಲಿ ಕೇವಲ 8 ಜನರಿಗೆ ಮಾತ್ರ ಪಾಸಿಟಿವ್ ಬಂದಿದೆ. ಪಟ್ಟಣದ 5 ಜನರಿಗೆ ಹಾಗೂ ಗ್ರಾಮೀಣ ಭಾಗದ 3 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಪಟ್ಟಣದ ಹೊಸ ಓಣಿಯಲ್ಲಿ 4 ಜನರಿಗೆ ಕೊರೊನಾ ಸೋಂಕು ತಗುಲಿದೆ. ಆನಂದನಗರದಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ.  ಗ್ರಾಮೀಣ ಭಾಗದಲ್ಲಿ ನೋಡುವುದಾದರೆ, ಮಳಗಿ ಗ್ರಾಮದಲ್ಲಿ 2 ಜನರಿಗೆ ಹಾಗೂ ಗುಂಜಾವತಿಯಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.