ಮುಂಡಗೋಡ:ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ವೊಂದನ್ನು ಕಳ್ಳರು ಎಗರಿಸಿದ ಘಟನೆ ತಾಲೂಕಿನ ತಾಲೂಕಿನ ಕಾತೂರ ಗ್ರಾಮದಲ್ಲಿ ಜರುಗಿದೆ.
ಸಾಂದರ್ಭಿಕ ಚಿತ್ರ
ಕಾತೂರ ಗ್ರಾಮದ ಸಿರಾಜ ಭಾಷಾಸಾಬ ಬೊಮ್ಮನಳ್ಳಿ ಎಂಬುವರಿಗೆ ಸೇರಿದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ಬೈಕ್ ಕಳ್ಳತನವಾಗಿದೆ. ಜೂನ.5ರಂದು ಮನೆಯ ಮುಂದೆ ನಿಲ್ಲಿದ್ದ ಬೈಕ್‌ನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ. ಕೆ.ಎ.31/ಯು00--ನಂಬರಿನ ಕಪ್ಪ ಬಣ್ಣದ ಬೈಕ್ ಕಳ್ಳತನವಾಗಿದ್ದು, ಹುಡುಕಿಕೊಡುವಂತೆ ಮುಂಡಗೋಡ ಪೊಲೀಸರಿಗೆ ದೂರು ನೀಡಿದ್ದಾರೆ. ಮುಂಡಗೋಡ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು