ಮುಂಡಗೋಡ:ಪಟ್ಟಣದ ಹುಬ್ಬಳ್ಳಿ ರಸ್ತೆಯ ಕೆಂಪಟ್ಟಿ ಏರಿ ಸನಿಹ, ಬೈಕ್ ಅಪಘಾತ ಸಂಭವಿಸಿದೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರು ಬೈಕ್ ಸವಾರರು, ರಸ್ತೆಯಿಂದ ಆಚೆಗೆ ಕತ್ತಲಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇಬ್ಬರೂ ಬೈಕ್ ಸವಾರರನ್ನು ಅಂಬುಲೆನ್ಸನಲ್ಲಿ ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಸವಾರರಲ್ಲಿ ಒಬ್ಬನು ಗಂಭೀರವಾಗಿ ಗಾಯಗೊಂಡಿದ್ದಾನೆ. ಮತ್ತೊಬ್ಬನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸವಾರರು ಬಾಚಣಕಿ ಗ್ರಾಮದವರೆಂದು ತಿಳಿದುಬಂದಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತವಾಗಿದೆಯೋ ಅಥವಾ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆಯಿಂದ ಇನ್ನೊಂದು ಬದಿಗೆ ಹೋಗಿ ಬಿದ್ದಿದ್ದಾರೋ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.
ಗಾಯಾಳುವನ್ನು ಅಂಬುಲೆನ್ಸಗೆ ಹಾಕಿದ ಪಿ.ಎಸ್.ಐ..!!
ಇಬ್ಬರು ಬೈಕ್ ಸವಾರರು ಪ್ರಜ್ಞೆ ಇಲ್ಲದೇ, ಗಂಭೀರವಾಗಿ ಗಾಯಗೊಂಡು ಬಿದ್ದಿರುವ ಸ್ಥಳಕ್ಕೆ ಬಂದ ಪಿ.ಎಸ್.ಐ ಬಸವರಾಜ ಮಬನೂರ ಹಾಗೂ ಪೊಲೀಸರು, ಗಾಯಾಳುಗಳನ್ನು ಎತ್ತಿ ಅಂಬುಲೆನ್ಸಗೆ ಹಾಕಿದರು. ಗುಪ್ತಚರ ವಿಭಾಗದ ಪೊಲೀಸ ಸಿಬ್ಬಂದಿ ದಿನೇಶ, ಎ.ಎಸ್.ಐ ನಾಗೇಕರ್ ಹಾಗೂ ಯುವಮುಖಂಡ ಲಕ್ಷ್ಮಣ ಬನ್ಸೋಡೆ ಸಹಕರಿಸಿದರು.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು