ಮುಂಡಗೋಡ:ದುಷ್ಕರ್ಮಿಗಳ ಕೃತ್ಯಕ್ಕೆ 58 ಬಾಳೆಗಿಡ, 10 ಅಡಿಕೆ ಗಿಡಗಳು ಜೀವ ಕಳೆದುಕೊಂಡಿವೆ. ತೋಟಕ್ಕೆ ನುಗ್ಗಿರುವ ಕಿಡಿಗೇಡಿಗಳು ಬಾಳೆ, ಅಡಿಕೆ ಗಿಡಗಳನ್ನು ಕತ್ತರಿಸಿರುವ ಘಟನೆ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.1ರಲ್ಲಿ ಜರುಗಿದೆ.
ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂ.1ರ ರೈತ ಮಿಗಮಾರ್ ಲೋಬ್ಸಂಗ್ ರಿಂಚೆನ್ ಎಂಬುವರಿಗೆ ಸೇರಿದ ತೋಟದಲ್ಲಿ ಕಿಡಿಗೇಡಿಗಳು ದುಷ್ಕøತ್ಯ ನಡೆಸಿದ್ದಾರೆ. ಮಂಗಳವಾರ ಸಂಜೆಯಿಂದ ಬುಧವಾರ ಬೆಳಿಗ್ಗಿನ ಅವಧಿಯಲ್ಲಿ ತೋಟಕ್ಕೆ ಬಂದಿರುವ ಕಳ್ಳರು, ಅಡಿಕೆ, ಬಾಳೆ ಗಿಡಗಳನ್ನು ಕತ್ತರಿಸಿದ್ದಾರೆ. ಬೆಡ್ ಹಾಗೂ ಕಾಟ್‍ನ್ನು ಸುಟ್ಟು ಹಾಕಿದ್ದಾರೆ. ಔಷಧಿ ಸಿಂಪಡಿಸುವ ಪಂಪ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು