Ticker

6/recent/ticker-posts

ಬಂಧಿತ ಪಾಕಿಸ್ತಾನಿ ಮಹಿಳೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು..!ಹಿಂದು ಜಾಗರಣ ವೇದಿಕೆ ವತಿಯಿಂದ ಒತ್ತಾಯ..!!

ಮುಂಡಗೋಡ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪಾಕಸ್ತಾನಿ ಮೂಲದ ಮಹಿಳೆಯನ್ನು ಬಂಧಿಸಿರುವ ಪ್ರಕರಣವನ್ನು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಹಿಂದು ಜಾಗರಣ ವೇದಿಕೆ ವತಿಯಿಂದ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮನವಿಯಲ್ಲಿ ಏನಿದೆ..?
ದೇಶದ ಯಾವ ಮೂಲೆಯಲ್ಲಿ ಭಯೋತ್ಪಾದನೆಯ ಕೃತ್ಯಗಳು ನಡೆದರೂ, ಅದರ ಸಂಬಂಧ ಭಟ್ಕಳದೊಂದಿಗೆ ಜೋಡನೆಯಾಗಿರುವುದು ನೋವಿನ ಸಂಗತಿಯಾಗಿದೆ. ಭಟ್ಕಳಕ್ಕೆ ತಗುಲಿರುವ ಕಳಂಕ ಪರಿಸ್ಥಿತಿಯನ್ನು ಈ ಹಂತದಲ್ಲಿ ಕಡಿವಾಣ ಹಾಕದಿದ್ದಲ್ಲಿ ಮುಂದೊಂದು ದಿನ ಅನಾಹುತಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಭಟ್ಕಳದಲ್ಲಿ ಪಾಕಿಸ್ತಾನಿ ಮಹಿಳೆಯನ್ನು ಬಂಧಿಸಿರುವ ವಿಚಾರ ಮಾಧ್ಯಮಗಳಿಂದ ಖಚಿತವಾಗಿದೆ. ಇಂತಹ ಸಾಕಷ್ಟು ನುಸುಕುಕೋರರು ನಕಲಿ ಪಾಸ್ ಪೋರ್ಟ, ನಕಲಿ ಆಧಾರಕಾರ್ಡ, ನಕಲಿ ವೋಟರ ಐಡಿಗಳೊಂದಿಗೆ ಭಟ್ಕಳದಲ್ಲಿ ಬದುಕುತ್ತಿರುವ ಬಗ್ಗೆ ಸಂಶಯವಿದೆ. ಇದು ನಮ್ಮ ದೇಶದ ರಕ್ಷಣಾತ್ಮಕ ವಿಚಾರ ಆಗಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆಯಾಗಲೇ ಬೇಕಾಗಿದೆ ಎಂದು ಹಿಂದು ಮುಖಂಡರು ಒತ್ತಾಯಿಸಿದ್ದಾರೆ.
ಎಲ್ಲವೂ ಬಯಲಾಗಬೇಕು....!!
ಪಾಕಿಸ್ತಾನಿ ಮೂಲದ ಬಂಧಿತ ಮಹಿಳೆಗೆ ನಕಲಿ ದಾಖಲೆಯನ್ನು ಸೃಷ್ಟಿ ಮಾಡಿಕೊಟ್ಟವರು ಯಾರು? ಇಷ್ಟು ದಿನ ಇವರಿಗೆ ಆಶ್ರಯ ಕೊಟ್ಟವರು ಯಾರು? ಮತ್ತೆಷ್ಟು ಜನರಿಗೆ ಇವರು ನಕಲಿ ದಾಖಲೆ ಸೃಷ್ಟಿ ಮಾಡಿಕೊಟ್ಟಿದ್ದಾರೆ? ಬಂಧಿತ ಮಹಿಳೆ ಭಟ್ಕಳದಲ್ಲಿ ಇಲ್ಲಿಯವರೆಗೆ ಯಾವ ಚಟುವಟಿಕೆಗಳನ್ನು ನಡೆಸಿದ್ದಾಳೆ? ಇವೆಲ್ಲಾ ವಿಚಾರಗಳನ್ನು ಪೊಲೀಸ ತನಿಖೆಯಿಂದ ಬಯಲಿಗೆಳೆಯಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಸಂಚಾಲಕ ಪ್ರಕಾಶ ಬಡಿಗೇರ, ಪ.ಪಂ‌.ಉಪಾಧ್ಯಕ್ಷ ಮಂಜುನಾಥ ಹರಮಲಕರ್, ರಾಮಸೇನೆಯ ಷಣ್ಮುಖ ಕೋಳೂರ, ವಿಶ್ವನಾಥ ನಾಯರ್, ಪರುಶುರಾಮ ಭೋವಿ ಉಪಸ್ಥಿತರಿದ್ದರು.