ಮೇವಾಡದ ಮಹಿಷಮರ್ಧಿನಿ
ಭಾರತದ ಚರಿತ್ರೆಯನ್ನು ಯಾವುದೇ ಹಸ್ತಕ್ಷೇಪವಿಲ್ಲದೇ ಓದುತ್ತಾ ಹೋದರೆ
ನಾವು ಕೈಯಿಟ್ಟಲೆಲ್ಲ ರತ್ನವೇ ಸಿಗುತ್ತೆ ಅಂತಹ ರತ್ನದಲ್ಲಿ ಚಿತ್ರಕೂಟದ ರಣ ಬಿಸಿಲಿನಲ್ಲಿ
ಫಳ ಫಳ ಹೊಳೆಯುವ ರತ್ನಸಿಂಹ(ರತನ್ ಸಿಂಗ್)ನ ಮನದನ್ನೆ,ರಾಣಿ ಪದ್ಮಾವತಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾಳೆ.
ಪದ್ಮಾವತಿಯ ಕಥೆಯಲ್ಲಿ ಅವಳನ್ನು ಕಾಣಲು ಸಿಂಹಳಕ್ಕೆ ತೆರಳಿ ಅಲ್ಲಿ ಅವಳ ತಂದೆ ಗಂಧರ್ವಸೇನನನ್ನು ಗೆದ್ದು
ಅವಳನ್ನು ವರಿಸುವಲ್ಲಿ ರತ್ನಸಿಂಗನು ರಾಮನಾಗಿಯೂ, ಮೇವಾಡದ ವಾಮಾಚಾರಿ ರಾಘನನು ಶೂರ್ಪನಖಿಯಾಗಿಯೂ,
ಆರು ತಿಂಗಳ ಕಾಲ ನಸುಗುನ್ನಿಯಂತೆ ಬೀದಿನಾಯಿಯಂತೆ ರಜಪೂತರ ಕೋಟೆ ಕಾಯುವ ಖಿಲ್ಜಿಯು ರಾವಣನಾಗಿಯೂ,
ಪದ್ಮಾವತಿ ತನ್ನ ಅಪ್ರತಿಮ ಪಾವಿತ್ರ್ಯತೆಗೆ ಏಕಕಾಲಕ್ಕೆ ಸೀತೆಯಾಗಿಯೂ;ಸಾವಿತ್ರಿಯಾಗಿಯೂ ತೋರುತ್ತಾಳೆ.
ಹಿರಾಮಣಿ ಎಂಬ ಗಿಣಿಯ ಮೂಲಕ ರತ್ನ ಸಿಂಹನು ಸಿಂಹಳದ ರಾಣಿ ಪದ್ಮಾವತಿಯ ಸೌಂದರ್ಯವನ್ನು ಕೇಳಿ ಮಂದಸ್ಮಿತನಾಗಿ ಕೊನೆಗೆ ತನ್ನ ಆರಾಧ್ಯನಾದ ಏಕನಾಥನ ಅಪ್ಪಣೆಯೊಂದಿಗೆ ಗಂಧರ್ವಸೇನನನ್ನು ಗೆದ್ದು ಅವನಿಂದ ಸತ್ಕರಿಸಲ್ಪಟ್ಟು ವರೋಪಚಾರಗಳೊಂದಿಗೆ ಪದ್ಮಾವತಿಯನ್ನು ಪತ್ನಿಯಾಗಿ ಅವಳ ಜೊತೆಗೆ
16,000 ಪದ್ಮಿನಿಯೊರಡೊನೆ(ಶ್ರೇಷ್ಠ ತಳಿಯ ಕನ್ಯೆಯರು) ತನ್ನ ಸೈನಿಕರಿಗೆ ಪತ್ನಿಯರಾಗಿ ಪಡೆದು ಮೇವಾಡಕ್ಕೆ ತೆರಳುತ್ತಾನೆ.
ರಾಘವ ಚೈತನ್ಯನೆಂಬ ಅವನ ಗುರುವು ರಾಜದ್ರೋಹದ ತಪ್ಪಿಗೆ ಗಡಿಪಾರಿನ ಸಜೆ ಅನುಭವಿಸುತ್ತಿರುತ್ತಾನೆ ಈ ಕಡೆ
ಜಲಾಲುದ್ದೀನ್ ನ ಹತ್ಯೆಯೊಂದಿಗೆ ಇತಿಹಾಸ ಕಂಡೂ ಕೇಳರಿಯದ ವಿಕೃತ ಕಾಮಿ ಆಲ್ಲಾವುದ್ದೀನ್ ಖಿಲ್ಜಿಯ ಉದಯವಾಗುತ್ತದೆ. ಅವನ ಅಂತಃಪುರದಲ್ಲಿ 70,000 ಲೈಂಗಿಕ ಸೇವಕರು ಅವನಿಗೆ ತುಂಬ ಇಷ್ಟವಾದವನು ಯಾವತ್ತೂ ಅವನ ಹೆಂಡತಿಗಿಂತ ಜಾಸ್ತಿ ಅವನ ಜೊತೆಗೆ ಇದ್ದವನು ಚಾಂದ್ ರಾಮನೆಂಬ ಮತಾಂತರಿ ಷಂಡ ಮಲ್ಲಿ ಕಫುರ್.
ಈ ನೀಚನ ಕ್ರೂರದೃಷ್ಟಿಯೇ ದಕ್ಷಿಣದ ಸಂಪತ್ಭರಿತ ಹಿಂದವೀ ಸಾಮ್ರಾಜ್ಯಕ್ಕೆ ಮುಳುವಾಗಿದ್ದು.
ಆ ವಿಕೃತ ಕಾಮಿ ಖಿಲ್ಜಿ ಈ ಷಂಡ ಮಲ್ಲಿಕಫುರ್ ನಿಂದಲೇ ಸಾಯುತ್ತಾನೆ ಎನ್ನುವುದು ಗಮನಾರ್ಹ ಮತ್ತು ಖುಷಿಕೊಡುವ ವಿಷಯ.
ಈ ಖಿಲ್ಜಿಯ ಆಸ್ಥಾನಕ್ಕೆ ಓಡಿ ಬರುವ ಮಾಂತ್ರಿಕ ರಾಘವನು ಪದ್ಮಾವತಿಯ ಸೌಂದರ್ಯವನ್ನು ವರ್ಣಿಸುತ್ತಾನೆ ದೇವಗಿರಿಯ ರಾಣಿಯ ಶಾಪಕೋಪಕ್ಕೆ ಆಗ ತಾನೆ ಗುರಿಯಾಗಿದ್ದ ಈ ವಿಕೃತ ಕಾಮಿಯು ನಮ್ಮ ದ್ವಾರಸಮುದ್ರ(ಹೊಯ್ಸಳ ಮೂರನೇ ಬಲ್ಲಾಳ ಆಳುತ್ತಿದ್ದ ಈಗಿನ ಬೇಲೂರು,ಹಳೆಬೀಡು),ಪಾಂಡ್ಯ,ಚೇರರ ಕುಲದ ಸಾಧ್ವಿಯರ ಹಿಡಿಶಾಪಕ್ಕೆ ಒಳಗಾಗಿದ್ದ ಈ ಧರ್ಮಾಂಧನು ಕೊನೆಗೆ ತನ್ನ ಕಣ್ಢನ್ನು ಪದ್ಮಾವತಿಯ ಮೇಲೆ ಹಾಕುತ್ತಾನೆ.
ಈ ಗುಳ್ಳೆನರಿಯಆ ಹ್ಶಾನವನ್ನು ಆಸ್ಥೆಯಿಂದಲೇ ಸ್ವೀಕರಿಸಿ.ಹೋದವನನ್ನು ಹೊಂಚಿನಿಂದ ಬಂಧಿಸುತ್ತಾನೆ ಖಿಲ್ಜಿ.
ನಂತರ ಪದ್ಮಾವತಿಗೆ ದೆಹಲಿಗೆ ಬರಹೇಳುವ ಇವನನ್ನು ರಾಜತಂತ್ರದಿಂದ ಎದುರಿಸುತ್ತಾಳೆ ಆ ದಿಟ್ಟ ಮಹಿಳೆ!
ಮೂರುವರೆ ಸಾವಿರ ಸ್ತ್ರೀವೇಶ ಹೊತ್ತ ಸೈನಿಕರೊಡನೆ ಬಂದು ರತ್ನಸಿಂಗನನನ್ನು ಬಿಡಿಸಿ.ಕರೆದೊಯ್ಯುತ್ತಾಳೆ
ಯಾವ ರೀತಿ.ದೇವಿಗೆ ಸಿಂಹವೋ ಅದೇ ರೀತಿ ಘೋರಾಸಿಂಗನು ಇಡೀ ಖಿಲ್ಜಿಯ ಮಹಮದೀಯ ಸೇನೆಯನನ್ನು ತುಂಡರಿಸುತ್ತಾನೆ,ಜಾಫರ್ ಎಂಬ ಹೇಡಿ ಅವನಿಗೆ ಹಿಂದಿನಿಂದ ಕಾಲಿಗೆ ಖಡ್ಗ ಬೀಸಿ.ಕೆಳಗೆ ಬಿದ್ದಾಗ ತಲೆ ಹಾರಿಸುತ್ತಾನೆ
ರಜಪೂತರ ತಾಕತ್ತೆ ಅಂತಹದು ಶಿರವಿರದ ದೇಹ.ಹೊಡೆದ ಒಂದೇ ಏಟಿಗೆ ಖಿಲ್ಜಿಯ ಸೇನಾಧಿಪತಿ ಜಾಫರ್ ನ ಪ್ರಾಣ ಹೋಗುತ್ತದೆ.
ಅವನ ಮಗನಾದ ಬಾದಲ್ ಕರುಳು ಹೊರಗೆ ಬಿದ್ದರೂ ಪಗಡಿಯನ್ನು ಹೊಟ್ಟೆಗೆ ಸುತ್ತಿ ಮಹಮದೀಯರ ನಿರ್ನಾಮಗೈಯುತ್ತಾನೆ.
ವರ್ಷದ ನಂತರ ನಡೆಯುವ ಏಳುವರೆ ತಿಂಗಳ ಮಹಾನ್ ಯುದ್ಧದಲ್ಲಿ ಮೋಸದಿಂದ ರತ್ನಸಿಂಗನನ್ನು ಗೆದ್ದು ಕೋಟೆಗೆ ಲಗ್ಗೆಯಿಟ್ಟಾಗ ಮತಾಂಧ ಖಿಲ್ಜಿಗೆ ಸಿಗುವುದು ಪದ್ಮಾವತಿಯ ಬೂದಿಯಷ್ಟೇ!
ಇದು ಈಗಿನ ಸ್ತ್ರೀವಾದಿಗಳಿಗೆ ಆದರ್ಶವಾಗಬೇಕಾದ ಕಥೆ, ಒಬ್ಬ ಮಲ್ಲಿಕಫುರ್ ನಿಗಾಗಿ ಮಲ್ಲಿಕ್ ಜಹಾನ್(ಮೆಹರುನ್ನಿಸ),ಶಾದ್ ಖಾನ್ ಎಂಬ ತನ್ನ ಹೆಂಡತಿ ಮಕ್ಕಳನ್ನು ಜೈಲಿಗಟ್ಟಿದ ನೇರವಾಗಿ ಜೀವಮಾನದಲ್ಲಿ ಒಂದೂ ಯುದ್ಧಗೆಲ್ಲಲಾರದ ಪರಮ ಹೇಡಿ ಖಿಲ್ಜಿಯ ಕಥೆಯನ್ನು ಹೇಳಿ ನಮ್ಮ ಶಾಲಾ ಪುಸ್ತಕಗಳನ್ನು ಬರೆಯುವವರು ಏನು ಸಾಧಿಸುವರೋ?!
ಪದ್ಮಾವತಿಯ ಸಂತತಿ ಸಾವಿರವಾಗಲಿ, ಸ್ತ್ರೀ ವಾದ ವೆಂದು ಕುಡಿದು,ತೂರಾಡಿ ಲೈಂಗಿಕ ವಾಂಛೆ ತೀರಿಸಿಕೊಳ್ಳುವುದೇ ಪರಮಗುರಿ ಎಂದು ಹಂಬವಲಿಸುವ ಈಗಿನ ಕೆಲ ತಳಿಗಳು ಸ್ವಲ್ಪವಾದರೂ ಇಂತಹ ಚರಿತ್ರೆಯಯನ್ನು ಓದಿದರೆ ಅವರನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ
ಸಮಾಜಃಕ್ಕೆ,ಸ್ವಧರ್ಮಕ್ಕೆ ಎರಡಕ್ಕೂ ಮಹದುಪಕಾರ ಮಾಡಿದಂತಾಗುವುದು.
ಆಕರ:-ಸದ್ಯೋಜಾತ ಭಟ್ಟರ "ಶಿಲೆಗಳಲ್ಲಡಗಿದ ಸತ್ಯ"
ಅಂಕಣ - ನಿಖಿಲ್ ಎಬಿ -ಮುಂಡಗೋಡ

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು