ಶಬ್ದವೇದಿ
ದಟ್ಟ ಅಡವಿಯ ನೆರಳನ್ನಾಶ್ರಯಿಸಿ ನಡೆಯುತ್ತಿರುವ ಭೈರಾಗಿಯ
ಹಿಂದೆ ಹದಿಹರೆಯದ ಯುವಕನ ಕುತೂಹಲ ತುಂಬಿದ ಕಣ್ಣುಗಳು
ಗಹನವಾದ ಅನುಸರಣೆಯಲ್ಲಿದ್ದವು; ಒಂದು ಹಂತದ ಮೇಲೆ
ಅವನ ತಲೆಯ ಮೇಲೆ ಕೈಯಿಟ್ಟು "ಕುಮಾರ ಪ್ರಥ್ವಿ, ದೂರದಲ್ಲಿ ಕೂಗುತ್ತಿರುವ
ಕಾಡುಪ್ರಾಣಿಯ ಧ್ವನಿ ಕೇಳುತ್ತಿದೆಯೇ? ಆ ಪ್ರಾಣಿಗೆ ಗುರಿ ಇಟ್ಟು ಹೊಡೆಯಬಲ್ಲೆಯಾ?"
ಎನ್ನುತ್ತಾನೆ. ಮಹಾನ್ ಚಕ್ರವರ್ತಿ ಪಟ್ಟದ ಭಾವಿ ಮಾಲೀಕನಾದ ಆ ಹುಡುಗನ ಕೈ ಕಂಪಿಸಿ
ಹೋಗುತ್ತವೆ;ಹದಿನಾರು ಭಾಷೆ, ಸಾಹಿತ್ಯ, ಮೀಮಾಂಸೆ, ವೇದ-ವೇದಾಂಗ, ಔಷಧ, ಸಂಗೀತ, ಶಸ್ತ್ರವಿದ್ಯೆಗಳನ್ನು
ಅರಿತ ಆ ಮಹಾನ್ ತೇಜಸ್ವಿಗೆ ಬರದೇ ಇದ್ದ ಒಂದೇ ಒಂದು ವಿದ್ಯೆಯೆಂದರೆ ಈ ಶಬ್ದವೇದಿ ವಿದ್ಯೆ, ಅದರ ಪ್ರಾತಕ್ಷಿತೆಯನ್ನು
ಎಷ್ಟೋ ಹಿಂದೆ ಕ್ಷಾತ್ರ ಕಸುಬನ್ನು ಇಂಗಿಸಿಕೊಂಡು ಸನ್ಯಾಸಿಯಾದ ತನ್ನ ಚಿಕ್ಕಪ್ಪ ಸಾದರಪಡಿಸಿದಾಗಲಂತೂ ಅವನ ಅಹಂಗೆ
ಪೆಟ್ಟು ಬಿದ್ದಿತ್ತು, ಅಂತೂ ಅವನ ಚಿಕ್ಕಪ್ಪ ಆ ವಿದ್ಯೆ ಅವನಿಗೆ ಕಲಿಸಿಯೇ ಮತ್ತೆ ಹಿಮಾಲಯಕ್ಕೆ ಹಿಂದಿರುಗುತ್ತಾನೆ.ಹೋಗುವ ಮುಂಚೆ "ಇದೇ ವಿದ್ಯೆ ಮುಂದೆ ನಿನ್ನ ಮಾನಧನವನ್ನ ಕಾಯುವುದು" ಎಂದು ಹೇಳಿ ಹೋಗುತ್ತಾನೆ.
ಹಾಗೆ ಹೋದ ಚಿಕ್ಕಪ್ಪನನ್ನು ನೋಡುತ್ತಾ ನಿಂತ ಆ ಹದಿಹರೆಯದ ಚಿಗುರು ಮೀಸೆಯ ಹುಡೂಗನ್ಯಾರು ಗೊತ್ತಾ?
ಹಿಂದವೀ ಸಾಮ್ರಾಜ್ಯ ಎಂದೂ ಮರೆಯಬಾರದಂತಹ ನಮ್ಮ ಚಾಲುಕ್ಯ ಪರಂಪರೆಯ ಕೈಯಡಿಯಲ್ಲಿ ಬೆಳೆದ
ರಜಪೂತ ವಂಶದ ಮಹಾನ್ ಚಕ್ರವರ್ತಿ ಪ್ರಥ್ವಿರಾಜ್ ಚೌವ್ಹಾಣ್!
ಅವರ ತಂದೆ ಸೋಮೇಶ್ವರರಿಗೆ ತಾಯಿ ಕಡೆಯ ಸಂಬಂಧಿಗಳು ಚಾಲುಕ್ಯರು ಭಾರತಾದ್ಯಂತ ವ್ಯಾಪಿಸಿದ್ದ ಈ ಕುಲದ ಟಿಸಿಳಾದ ಸೋಲಂಕಿಗಳು ಅವರ ದೇಖರಿಕೆ ಮಾಡಿದ್ದರು,ತಾಯಿಯೂ ಕಳಚೂರಿ ಕುಲಕ್ಕೆ ಸಂಬಂಧಿಸಿದವಳು ತಂದೆಯ
ಮರಣಾನಂತರ ಹನ್ನೊಂದನೆಯ ವಯಸ್ಸಿಗೆ ಸಿಂಹಾಸನವೇರಿದ ಈ ರಾಜ ತನ್ನ ಅಮೋಘ ದಾಳಿಗಳಿಂದ ಸುತ್ತಲಿನ ಎಲ್ಲ
ಪ್ರದೇಶಗಳನ್ನು ಕೈವಶ ಮಾಡಿಕೊಂಡನು, ಇವನ ಆಪ್ತ ಚಂದ ಭಟ್ಟ ಅಥವಾ ಚಾಂದ್ ಬರದಾಯಿಯ ಜೊತೆಗೆ ಇವನ ಗೆಳೆತನ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿಯುವಂತಹದು, ತನ್ನ ಬ್ರಾಹ್ಮಣ ಗುರುಗಳ ಮಗನಾದ ಈತ ಅವನ ಸಾವಿನವರೆಗೂ ಜೊತೆಯಲ್ಲಿರುತ್ತಾನೆಂದರೆ ಸುದಾಮ-ಕೃಷ್ಣ,ಕರ್ಣ-ದುರ್ಯೋಧನರ ನಂತರ ನೆನಪಿಡಬೇಕಾದ ಅಪೂರ್ವ ಸ್ನೇಹವಿದು!
ಅವನ ಮಂತ್ರಿಮಂಡಲದಲ್ಲೂ ಕೂಡ ನಂಬಿಕಸ್ಥನಾಗಿ ಕುಲದ ಹಿರಿಯನಾಗಿ"ಭುವನೇಕಮಲ್ಲ" ನೆಂಬ ಕನ್ನಡ ಮೂಲದವನೇ ಇದ್ದ ಎಂಬುದು ಅತಿ ಗಮನಾರ್ಹವಾದ ವಿಷಯ!
ಬಂಡನಾಕದ ಜೈನ ಸನ್ಯಾಸಿಗಳನ್ನ ಮಣಿಸುವ ಘನಪಾಠಿಯಾದ ಈತನು ಪರಮಾರ,ಚಂದೇಲ,ಸೋಲಂಕಿ,ಗಹದ್ವಾಲರನ್ನು ತನ್ನ ಖಡ್ಗದ ಅಡಿಯಲ್ಲಿ ಸಾಮಂತರನ್ನಾಗಿಸುತ್ತಾನೆ. ಇವನಂತಹ ಮಹಾನ್ ಬಿಲ್ವಿದ್ಯೆ ಪಟುವನ್ನು ಚರಿತ್ರೆ ಕಂಡಿದ್ದು ಅಪರೂಪ, ಪೌರಾಣಿಕ ದಾಖಲುಗಳನ್ನು ಬಿಟ್ಟರೆ ಚರಿತ್ರೆಯಲ್ಲಿ ಬಿಲ್ವಿದ್ಯೆಯ ಪಟುವಾಗಿ ಗುರುತಿಸಿಕೊಳ್ಳುವುದೇ ಪ್ರಥ್ವಿರಾಜ ಚೌವ್ಹಾಣ್.
ಮಹಮದ್ ಘಜ್ನಿಯ ದಾಳಿಯ ನಂತರ ಭಾರತದ ಕಡೆ ಯಾವ ಕ್ರೂರಗ್ರಹದ ದೃಷ್ಟಿಯೂ ಬಿದ್ದಿರಲಿಲ್ಲ! ಅವನೊಬ್ಬನಿದ್ದ ಶಾಬೂದ್ದೀನ್ ಘೋರಿ ಮಹಾನ್ ಕುಡುಕ ಮತ್ತು ಲೋಭಿ ತನ್ನ ಗುರಿ ಸಾಮ್ರಾಜ್ಯ ವಿಸ್ತರಣೆ ಎಂದುಕೊಂಡವನ ಕಣ್ಣು ಭಾರತದ ಮೇಲೆ ಬಿತ್ತು ಆವತ್ತು ಎಡಬದಿಗೆ ಎದ್ದು ಬಂದಿದ್ದನೇನೋ ಎದುರುಗೊಂಡಿದ್ದು ವಿಕ್ರಮಾರ್ಕ ತೇಜ ಪ್ರಥ್ವಿರಾಜ.
ತಹರೇನ್ ನ ಬಳಿ ಇವನ ದಾಳಿಯನ್ನು ಕಂಡು ರೊಚ್ಚಿಗೆದ್ದು ತನ್ನ ಎರಡು ಲಕ್ಷ ಕುದುರೆ,ಮೂರು ಸಾವಿರ ಆನೆಯ ಬಲಿಷ್ಠ ಸೇನೆಯನ್ನು ತೆಗೆದುಕೊಂಡು ಘೋರಿಯ ಮುಂದೆ ನಿಂತಾಗ ಘೋರಿಯ ಜಂಘಾಬಲ ಉಡುಗಿಹೋಗಿತ್ತು.
ಹೀನಾಮಾನವಾಗಿ ಪ್ರಥ್ವಿರಾಜನ ಕೈಗೆ ಸಿಕ್ಕು ನಲುಗಿ ಹೋದ ಘೋರಿ ಸುಮಾರು ಆರು ತಿಂಗಳ ಖೈದಿಯಾಗಿ ತಹರೇನ್ ನಲ್ಲಿ ಕಳೆದ ಇವ ಹುಚ್ಚು ನಾಯಿಗಿಂತ ಭೀಕರವಾಗಿ ಹೊಡಿಸಿಕೊಂಡ ಈತನನ್ನು ಕರುಣೆಯ ಮೇರೆಗೆ ಪ್ರಥ್ವಿರಾಜರು ಬಿಟ್ಟಿದ್ದರು.
ಈ ಘಟನೆಯ ಬಳಿಕವಂತೂ ದೆಹಲಿ-ಅಜ್ಮೀರದ ಸಿಂಹಾಸನದ ಮೇಲೆ ಭಾರತದ ರಾಜರು ಅಪಾರ ಗೌರವ ಬೆಳಿಸಿಕೊಂಡರು. ಪ್ರಥ್ವಿರಾಜರ ಕೀರ್ತಿಮುಕುಟ ರಾರಾಜಿಸಿತು.(ಇವರ ಇಡೀ ಕುಲವನ್ನು ಕನ್ನಡ ಮೂಲದ ಚಾಲುಕ್ಯ ಮನೆತನದವರು ಮೊದಲಿಂದ ಕಾಪಾಡಿದ್ದು ಎನ್ನುವುದನ್ನ ಗಮನಿಸಬೇಕು) ನಂತರ ನಡೆದದ್ದು ಒಂದು ಗ್ರಹಣ.
ಜಯಚಂದ್ರನೆಂಬ ಕನೌಜಿನ ರಾಜ ತನ್ನ ಮಗಳ ಸ್ವಯಂವರವನ್ನೂ,ರಾಜಸೂಯವನ್ನೂ ಏರ್ಪಡಿಸಿ ಪ್ರಥ್ವಿರಾಜನಿಗೆ ಆಹ್ವಾನ ಕೊಡುವುದಿಲ್ಲ, ತನ್ನ ಮಗಳಾದ ಸಂಯೋಗಿತ ಅವನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಅವನ ಪ್ರತಿಮೆ ಮಾಡಿಸಿ ದ್ವಾರ ಪಾಲಕರು ನಿಲ್ಲುವ ಜಾಗದಲ್ಲಿ ನಿಲ್ಲಿಸಿದ! ಇದು ತಿಳಿದಿದ್ದೇ ತಡ ದಕ್ಷನೆದೆ ಮೇಲೆ ಕುಣಿವ ಭದ್ರನ ಹಾಗೆ
ಜಯಚಂದ್ರನ ರಾಜಸೂಯವನ್ನ ಧ್ವಂಸಮಾಡಿ ಸಂಯೋಗಿತಳನ್ನ ಕರೆದುಕೊಂಡು ಹೋಗುತ್ತಾನೆ.
ಹೇಡಿಯಾದ ಜಯಚಂದ್ರ ಅವನನ್ನ ನೇರವಾಗಿ ಎದುರಿಸದೇ ಒಳಸಂಚು ಮಾಡಿ ಘೋರಿಯ ಜೊತೆ ದುಷ್ಟಕೂಟವನ್ನು ಕೆಲ ದ್ರೋಹಿ ರಜಪೂತ ದೊರೆಗಳೊಡನೆ ರಚಿಸುತ್ತಾನೆ.
ಎರಡನೇ ತರೈನ್ ಯುದ್ದ ನಡೆಯುತ್ತದೆ.ಯಾವುದಕ್ಕೂ ಜಗ್ಗದೇ ಬಗ್ಗದೇ ಭೈರವನ ಅಪರಾವತಾರವಾಗಿ ಶತೃಗಳ ತುಂಡರಿಸುವ ಪ್ರಥ್ವಿರಾಜನ ಮೂರು ಲಕ್ಷ ಅಶ್ವದಳ ಮತ್ತು ಮೂರು ಸಾವಿರ ಗಜಪಡೆಯನ್ನು ಎದುರುಸಿವುದು ಈ ಘಟಬಂಧನಕ್ಕೆ ಅಸಾಧ್ಯವೆನಿಸುತ್ತದೆ. ರಾತ್ರೋ ರಾತ್ರಿ ಬಿಡಾರಕ್ಕೆ ಬೆಂಕಿ ಹಚ್ಚುತ್ತಾರೆ. ಸರಸ್ವತಿ ನದಿಯ ದಡದಲ್ಲಿ
ಪ್ರಥ್ವಿರಾಜನ ಬಂಧನವಾಗುತ್ತದೆ. ಅಪಘಾನಿಸ್ತಾನದ ಘಜ್ನಿಗೆ ಅವನನ್ನು ಕೊಂಡೊಯ್ಯುತ್ತಾರೆ ಈ ಕಡೆ ಚಾಂದ್ ಬರದಾಯಿಗೆ ಸುದ್ದಿ ಮುಟ್ಟಿ ಅವನೂ ಅಲ್ಲಿ ಹೋಗುತ್ತಾನೆ, ಆದರೆ ಕ್ರೂರಿ ಘೋರಿಯು ಪ್ರಥ್ವಿರಾಜನ ಕಣ್ಣುಗಳನ್ನೆ ಕೀಳಿಸಿರುತ್ತಾನೆ. ಈ ದೃಶ್ಯ ನೋಡಿ ಚಾಂದ್ ಬರದಾಯಿಗೆ ಭೂಮಿಯೆ ಬಿರಿದಂತಾಗುತ್ತದೆ.ಆದರೆ ಪ್ರಥ್ವಿರಾಜನ ಶಕ್ತಿಯನ್ನು ತಿಳಿದ ಅವನು ಘೋರಿಗೆ ಹೇಳುತ್ತಾನೆ ಅವನು ಶಸ್ತ್ರವಿದ್ಯಾ ಚತುರ ಅವನ ಈ ನೈಪುಣ್ಯವನ್ನು ಪರೀಕ್ಷಿಸಿ ಎಂದು; ಪರೀಕ್ಷೆಯ ಮಧ್ಯದಲ್ಲಿ ಅರಚಾಡುತ್ತಿದ್ದ ಘೋರಿಯ ಗಂಟಲಿಗೆ ಪ್ರಥ್ವಿರಾಜನ ಬಾಣ ನಾಟುತ್ತದೆ, ಅವರ ಚಿಕ್ಕಪ್ಪ ಹೇಳಿದ ಮಾತು ಅವನ ಕಿವಿಯಲ್ಲಿ ಆ ಕ್ಷಣ ರಿಂಗಣಿಸಿರಬೇಕು! ನಂತರ ಅಜ್ಮೀರದ ಸೂಫಿಸಂತನ ಸೋಗಿನಲ್ಲಿದ್ದ ಒಬ್ಬ ಮಹಾನ್ ಕುತಂತ್ರಿ ಅಲ್ಲಿ ಸಂಯೋಗಿತಳನ್ನು ಬೆತ್ತಲೆಯಾಗಿಸುತ್ತಾನೆ; ರಜಪೂತರ ಮಹಾನ್ ಸಾಮ್ರಾಜ್ಯದ ಈ ಸುವರ್ಣ ಕಾಲದ ಘಳಿಗೆಗಳು ಕುತಂತ್ರಿಗಳ ಅಸೂಯೆಗೆ ಸಿಲುಕಿ ನಿಂತುಬಿಡುತ್ತವೆ .
ತಾಯಿ ಮಣ್ಣಿನ ಮೇಲೆ ಕಾಲಿಟ್ಟ ಈ ಪಿಪಾಸುಗಳ ಕೈಗೆ ಸಿಗಲು ಇಚ್ಜಿಸದ ಚಾಂದ್ ಮತ್ತೆ ಪ್ರಥ್ವಿ ಒಬ್ಬರನ್ನೊಬ್ಬರು ಚುಚ್ಚಿಕೊಂಡು ಆನಂದದಿಂದಲೇ ಸಾಯುತ್ತಾರೆ, ಬಿದ್ದ ರಕ್ತ ಒಂದಾಗುತ್ತದೆ, ಜನ್ಮಭೂಮಿಯ ತಲೆಗೆ ರಂಗಾಗುತ್ತದೆ.
ಅಂಕಣ -ನಿಖಿಲ್ ಎಬಿ - ಮುಂಡಗೋಡ

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು