ಕೊರೋನಾ ಸಂತೆ
ನಗು ನಲಿವಿನ ಜಂಜಾಟದ ಕಷ್ಟದಲೂ,
ಸಾಗಿತ್ತು ಜೀವನ ಸಂತೋಷದಲಿ,
ಬಂತೊಂದು ಬಿರುಗಾಳಿ ಕೊರೋನಾ ಹೆಸರಿನಲಿ,
ಸ್ಪರ್ಶ, ನಗು, ಮೋಹವ ಕೊಲ್ಲುತಲಿ,
ಕೆಲವರು ಮಾಡಿದರು ಹಣವನ್ನು,
ಕೆಲವರು ಮೀರಿದರು ಮಾನವೀಯತೆಯನು, ಕೆಲವರು ನೀಡಿದರು ಪ್ರಾಣವನು,
ಕೆಲವರು ಅರಿತರು ಜೀವನವನು,
ಆದರು ಅರಿಯಲಿಲ್ಲ ರೋಗದ ಮರ್ಮವನ್ನು ,
ಹಣವಿದ್ದವರು ಮರಣವ ಗೆದ್ದರು, ಹಣವಿಲ್ಲದವರು ಮರಣ ಕಂಡರು, ಹಣದಾಸೆಗೆ ಹಲವರು ಹೀನರಾದರು,
ಹಣವೆ ದೇವರೆಂದವರು ಅರಿಯಲಿಲ್ಲ ಶಿವನಾಟ,
ಅವನ ಲೋಕದಲ್ಲಿವೆ ಹಲವಾರು ಚಿಂತೆ, ಅದರಲ್ಲಿ ಕೇವಲ ಕೊರೋನಾ ಸಂತೆ......
ಉದಯ ಎಸ್ ರೇವಣಕರ
ಮುಂಡಗೋಡ 9611403212

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು