Ticker

6/recent/ticker-posts

ಮರಳಿನಿಂದ ಪ್ರೇಮಸೌಧ ಕಟ್ಟಿದವನು ಮಾಧವ ಅದರ ಒಳಗೆ ಇಟ್ಟು ನಲಿದ ತನ್ನ ರಾಧೆಯ ಜೀವವ

 ಮರಳಿನಿಂದ ಪ್ರೇಮಸೌಧ ಕಟ್ಟಿದವನು ಮಾಧವ

ಅದರ ಒಳಗೆ ಇಟ್ಟು ನಲಿದ ತನ್ನ ರಾಧೆಯ ಜೀವವ||ಮರಳಿ||



ವಿರಹದುರಿಯ ಅಲೆಯು ಬಡಿದು

ಮರಳ ಕಣವು ಅದುರಲು

ಮುರುಳಿ ಸ್ವರವು ಬಿರಿದ ಹಾಗೆ

ರಾಧೆಯೊಡಲು ಅಳುಕಲು


ಜಗದ ಎಲ್ಲ ಮಾಯೆಗಳನು 

ತನ್ನ ಕೈಯಲ್ಲಿ ಹಿಡಿದವ

ಅವಳ ಹೊಳೆವ ಜಗವ ಬೆಳಗೋ

ಕಣ್ಣಿನಲ್ಲೇ ಕರಗುವ


ಕಥೆಯ ಕೃಷ್ಣ ದ್ವಾರಕಾ ನಿಲಯ

ಬೇಡಿದೆಲ್ಲ ಕೊಡುವನು

ನಿನ್ನ ಕೃಷ್ಣ ಬೀದಿಹೊಲೆಯ

ಬರಿದೆ ನಿನ್ನ ದಾಸನು


ಕ್ಷಮಿಸು ರಾಧೆ ಕೊಡೆನು ಬಾಧೆ

ಬಯಸಿ ನಾನು ದೇಹವ

ಎದೆಯ ಬಗಿದು ಇಣುಕಿ ನೋಡು

ಅಲ್ಲು ಕಾಣುವೆ ಪ್ರೇಮವ

ಕವನ/ನಿಖಿಲ್ ಎಬಿ -ಮುಂಡಗೋಡ