Ticker

6/recent/ticker-posts

"ಅಮ್ಮ" (ನಾನು ಹುಟ್ಟಿದ ದಿನ, ನಿನ್ನ ಮರುಜನ್ಮ)

ಹೊಗಳಿಕೆಗೆ ನಿಲುಕದ, ಬರವಣಿಗೆಗೆ ಸಾಟಿಯಿಲ್ಲದ,

ಆಲೋಚನಾ ಮಿತಿಗೂ ಸಿಕ್ಕದ,ಕಲ್ಪನಾ ಲೋಕಕ್ಕೆ ಎಟುಕದ,

ಬರೆದಷ್ಟು ಬರಿಯಬೇಕೆಂದೆನಿಸುವ, ಹಾಡಿದಷ್ಟು ಹಾಡಬೇಕೆಂದೆನಿಸುವ,

ಪ್ರಕೃತಿಯ ಪ್ರತಿ ರೂಪವೇ ನೀನು!

ಮೂರು ಮಾಸಗಳ ನಂತರ ನಾನು ಬಂದಿರುವೆನೆಂದು ನಿನಗಾದ ಆನಂದ,

ಲೋಕದ ಭಯವಿಲ್ಲದಂತೆ ಗರ್ಭದಲ್ಲಿ ನೀನನಗೆ ಬೆಚ್ಚಗಿನ ಸುರಕ್ಷೆ ಕೊಟ್ಟಾಗ,

ನೀನು ಬಯಸಿದ್ದು ತಿನ್ನದೆ ನನಗಾಗಿ ನಾನು ಬಯಸಿದ್ದನ್ನು ನೀನು ತಿಂದಾಗ,

ನನಗಾಗಿ ನಿನಗಿಷ್ಟವಿಲ್ಲದ ಸೂಜಿಮದ್ದು,ಮಾತ್ರೆ, ಔಷದಿಯನ್ನು ಸೇವಿಸಿದಾಗ,

ಮನುಕುಲ ಶ್ರೇಷ್ಟರಂತೆ ಧೀರ,ಶೂರ,ಜಾಣ ನಾನಾಗ ಬೇಕೆಂದು ಅವರ ಕಥೆಗಳ ನನಗೇಳಿದಾಗ,

ಪ್ರಪಂಚಕ್ಕೆ ನಾನು ಬರುವ ಮೊದಲು ಪ್ರಪಂಚ ಏನೆಂದು ನೀ ನನಗೆ ತಿಳಿಸಿಕೊಡುತ್ತಿದ್ದಾಗ,

ಗಾಢಾ ನಿದ್ದೆಯಲ್ಲಿ ನೀನಿರುವೆ ಎಂದು ತಿಳಿಯದೆ ನಾ ನಿನಗೆ ಒಡೆಯುತ್ತಿದ್ದ ನೋವು ಸಹಿಸಿ ಕೊಂಡಾಗ,

ನಾನು ಭೂಮಿಗೆ ಬರುವ ದಿನವನ್ನು ನಿನಗೆ ನೋವಾಗುವ ದಿನವೆಂದು ತಿಳಿದರು ಖುಷಿ ಪಟ್ಟಾಗ,

ನಿನಗಾದ ನೋವನ್ನು ಸಹಿಸಿ ನನ್ನ ಮೊದಲ ಬಾರಿಗೆ ನೋಡಿ ಮುತ್ತಿಕ್ಕಿದ ಕ್ಷಣದಲ್ಲಿ ನೀ ಅತ್ತಾಗ,

ನಾನು ಹುಟ್ಟಿದ ದಿನವನ್ನು ನಿನ್ನ ಮರುಹುಟ್ಟು ಎಂದು ತಿಳಿಯದೆ ನನ್ನ ಜನ್ಮದಿನವೆಂದು ಆಚರಿಸಿದಾಗ,

ತಾಯಿ ಎನ್ನಲೊ, ಅಮ್ಮ ಎನ್ನಲೊ, ದೇವತೆ ಎನ್ನಲೊ, ಕ್ಷಮಯಾಧರಿತ್ರಿ ಎನ್ನಲೊ, ಪ್ರಪಂಚವೇ ನೀನೆನ್ನಲೊ,

ಏನೆಂದು ಕರೆಯಲಿ ನಾ ನಿನ್ನ?

ಏನೇ ಹೇಳಿದರು,ಏನೇ ಬರೆದರೂ, ಏನೇ ಮಾಡಿದರು, ಕೊಡ ಬಲ್ಲೆನೆ ನಾನು ನಿನಗೆ ನೀ ಕೊಟ್ಟ ಆ ಪ್ರೀತಿ ವಾತ್ಸಲ್ಯಾನ??

ಹುಟ್ಟು ಹಬ್ಬದ ಶುಭಾಶಯಗಳು ಮಾತೋಶ್ರೀ....

ರಚನೆ:ಕಾರ್ತಿಕ ರವೀಂದ್ರರಾವ ನಾಡಗೇರ
          ಬಸವನ ಬೀದಿ, ಮುಂಡಗೋಡ