ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿನ ರೈತನೊಬ್ಬರ ಅಡಿಕೆ ತೋಟದಲ್ಲಿ ದುಷ್ಕರ್ಮಿಗಳು ಹೀನ ಕೃತ್ಯ ನಡೆಸಿದ್ದಾರೆ.
ಮೊಣಕಾಲುವರೆಗೆ ಬೆಳೆದಿದ್ದ ಮೂವತ್ತಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಕಡಿದು ಹಾಕಿದ ಘಟನೆ ಗುರುವಾರ ಜರುಗಿದೆ.
ರೈತ ಶಿವಾಜಿ ಶೇಕಾಯಿ ಎಂಬುವರಿಗೆ ಸೇರಿದ ಅಡಿಕೆ ತೋಟದಲ್ಲಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ. ಹಗಲುರಾತ್ರಿ ಕಷ್ಟಪಟ್ಉ ಬೆಳೆಸಿದ ಮರಗಳು ಕ್ಷಣಮಾತ್ರದಲ್ಲಿ ನೆಲಕ್ಕೆ ಬಿದ್ದಿವೆ. ರೈತ ಶಿವಾಜಿ ಹಾನಿಯಾದ ಸಸಿಗಳನ್ನು ಕಂಡು ದಿಕ್ಕೇ ತೋಚದಂತಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ದೃಶ್ಯ ಕಂಡುಬಂತು.
ಬುಧವಾರ ರಾತ್ರಿ ಸಮಯದಲ್ಲಿ ಕಿಡಿಗೇಡಿಗಳು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಹಾನಿಗೊಳಗಾದ ತೋಟಕ್ಕೆ ರೈತರಾದ ಕಲ್ಲನಗೌಡ್ರ ಬಸನಗೌಡ್ರ, ತುಕಾರಾಮ ಅಂಡೋಜಿ, ಸಂತೋಷ ಬೋಸಲೆ ಮುಂತಾದವರು ಭೇಟಿ ನೀಡಿ ಪರಿಶೀಲಿಸಿದರು.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು