Ticker

6/recent/ticker-posts

ಬಾಚಣಕಿ ಪಿಡಿಒ ವರ್ಗಾವಣೆಗೆ ಒತ್ತಾಯಿಸಿದ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರು!!

ಮುಂಡಗೋಡ: ಬಾಚಣಕಿ ಗ್ರಾಮ ಪಂಚಾಯತದಲ್ಲಿ ಗುರುವಾರ ನಡೆಯಬೇಕಿದ್ದ ಸಾಮಾನ್ಯ ಸಭೆ ರದ್ದಾಗಿದೆ.
ಕಾರಣ, ಸಭೆಗೆ ಬರಬೇಕಿದ್ದ ಪಿಡಿಒ ಅವರೇ ಗೈರಾಗಿದ್ದರು...!!
ಸಾಮಾನ್ಯ ಸಭೆ ಕರೆದರೂ ಪಿಡಿಒ ಗೈರಾಗಿ, ಅಲ್ಲಿನ ಜನಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ , ಗ್ರಾಮ ಪಂಚಾತ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ಮುಂಡಗೋಡದ ತಾಲೂಕು ಪಂಚಾಯತಗೆ ಬಂದು, ಪಿಡಿಓ ವರ್ಗಾವಣೆ ಮಾಡಬೇಕು. 14ನೇ ಹಣಕಾಸು ಅನುದಾನದ ಕಾಮಗಾರಿಗಳನ್ನು ಸೂಕ್ತ ತನಿಖೆ ನಡೆಸುವಂತೆ ಇಒ ಪ್ರವೀಣ ಕಟ್ಟಿ ಅವರಿಗೆ ಒತ್ತಾಯಿಸಿದರು.

ಮೂಲಸೌಕರ್ಯಗಳಿಲ್ವಂತೆ...!!
ಬಾಚಣಕಿ ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪಿಡಿಒ ಮುಂದಾಗುವುದಿಲ್ಲ. ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾತಿಗೆ ಪಿಡಿಒ ಸ್ಪಂದಿಸುವದಿಲ್ಲ. ಇದರಿಂದ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಕಳೆದ ನಾಲ್ಕು ತಿಂಗಳಿಂದ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಗ್ರಾಮಸ್ಥರು ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಈ ಕೂಡಲೇ ಪಿಡಿಒ ತಾರಾಮಣಿ ಅವರನ್ನು ವರ್ಗಾವಣೆ ಮಾಡಬೇಕು. ಕಾಮಗಾರಿಗಳ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.
ಬಾಚಣಕಿ ಗ್ರಾಮ ಪಂಚಾಯತ ಅಧ್ಯಕ್ಷ ನಾಗರಾಜ ಉಪಾಧ್ಯಾಯ, ಉಪಾಧ್ಯಕ್ಷೆ ತಿಪ್ಪವ್ವ ಡಾಕಪ್ಪ ಲಮಾಣಿ ಸೇರಿದಂತೆ ಹನ್ನೊಂದು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು