Ticker

6/recent/ticker-posts

ಲಾಕಡೌನ್ ನಿಂದ ರೈತ ಕಂಗಾಲು


 ಡೌನ್ ನಿಂದ ರೈತ ಕಂಗೆಟ್ಟಿದ್ದು, ಬೆಳೆದ ಬೆಳೆಯನ್ನು ಮಾರಲಾರದ ಸ್ಥಿತಿಯಲ್ಲಿದ್ದಾನೆ. ತಾಲೂಕಿನ ಬಹುತೇಕ ರೈತರು ಬೇಸಿಗೆ ಬೆಳೆಯಾಗಿ ಗೋವಿನಜೋಳವನ್ನು ಬೆಳೆದು ಒಣಗಿಸಲು ಹಾಕುತ್ತಿದ್ದಾರೆ. ಆದರೆ ಪ್ರತಿದಿನವೂ ಗಾಳಿ, ಗುಡುಗಿನೊಂದಿಗೆ ಸುರಿಯುತ್ತಿರುವ ಮಳೆಯು, ಗೋವಿನಜೋಳ ಬೆಳೆದಿರುವ ರೈತರ ನಿದ್ದೆಗೆಡಿಸಿದೆ. 
ಮಳೆಯ ಬಿಡುವು ನೋಡಿಕೊಂಡು, ಬೆಳೆ ಕಟಾವು ಮಾಡಿ ರಾಶಿ ಮಾಡಿದರೂ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತಿದೆ. ಕಳೆದ ವರ್ಷವೂ ಹೆಚ್ಚಿನ ಮಳೆಯಿಂದ ಗೋವಿನಜೋಳ ಬೆಳೆ ರೈತರ ಕೈ ಸುಟ್ಟಿತ್ತು. ಈಗ ಬೆಳೆ ಬಂದರೂ ಕೊಳ್ಳುವರಿಲ್ಲ. ಲಾಕ್ ಢವನ್ ನಿಂದ ಎಲ್ಲ ಮಾರುಕಟ್ಟೆ ಬಂದಾಗಿವೆ ಎಂದು ಮಧ್ಯವರ್ತಿಗಳು ಬಾಯಿಗೆ ಬಂದಂತೆ ಬೆಲೆ ಕೇಳುತ್ತಿದ್ದಾರೆ. ಸರ್ಕಾರ ರೈತರ ಸಮಸ್ಯೆಗೆ ಕೂಡಲೇ ಸ್ಪಂದಿಸಿ, ಸೂಕ್ತ ಬೆಲೆ ಕೊಡಿಸಬೇಕು ಎಂದು ತಾಲೂಕಿನ ರೈತರು ಒತ್ತಾಯಿಸಿದ್ದಾರೆ.