Ticker

6/recent/ticker-posts

ಬಡವರಿಗೆ ದಾನ ಮಾಡಿ ಜನ್ಮದಿನ ಆಚರಣೆ!

ಮುಂಡಗೋಡ:ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಪುತ್ರ ಹಾಗೂ ಯುವಮುಖಂಡ ವಿವೇಕ್ ಹೆಬ್ಬಾರ್ ಅವರ ಜನ್ಮದಿನವನ್ನು ಪಟ್ಟಣ ಪಂಚಾಯತ ಉಪಾಧ್ಯಕ್ಷ ಮಂಜುನಾಥ ಹರಮಲಕರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಲಮಾಣಿ ಬಡವರಿಗೆ ದಾನ ಮಾಡುವ ಮೂಲಕ ಸೋಮವಾರ ಆಚರಿಸಿದರು.

ಪಟ್ಟಣದ ಹೊರವಲಯದಲ್ಲಿರುವ ನಿರಾಶ್ರಿತ ಕುಟುಂಬಗಳಿಗೆ ಆಹಾರ ಸಾಮಗ್ರಿ ಹಾಗೂ ತರಕಾರಿ ನೀಡಿ, ಯುವಮುಖಂಡನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.


ಗುತ್ತಿಗೆದಾರ ರವಿ ಹಾವೇರಿ ಅವರು, ಮಾತನಾಡಿ ಯಲ್ಲಾಪುರ ಕ್ಷೇತ್ರದ ಯುವನಾಯಕರಾದ ವಿವೇಕ್ ಹೆಬ್ಬಾರ್ ಅವರಿಗೆ, ದೇವರು ಹೆಚ್ಚಿನ ಆಯುಷ್ಯ, ಆರೋಗ್ಯ ನೀಡಿ, ಕ್ಷೇತ್ರದ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.