Ticker

6/recent/ticker-posts

ಎಲ್.ವಿ.ಕೆ ಯಿಂದ ಕೋವಿಡ್ ಮೆಡಿಕಲ್ ಕಿಟ್ ವಿತರಣೆ...


ಮುಂಡಗೋಡ: ನಾರ್ಥ್ ಕರ್ನಾಟಕ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಂಗಸಂಸ್ಥೆಯಾಗಿರುವ ಲೊಯೋಲ ವಿಕಾಸ ಕೇಂದ್ರದ ಸದಸ್ಯರು, ಮುಂಡಗೋಡ ತಾಲೂಕಾ ಆಸ್ಪತ್ರೆಗೆ ಕೋವಿಡ್ ಮೆಡಿಕಲ್ ಕಿಟ್ ನ್ನು ಶನಿವಾರ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಚ್.ಎಫ್.ಇಂಗಳೆ ಅವರಿಗೆ ಹಸ್ತಾಂತರಿಸಿದರು. 


ಮುಂಡಗೋಡದ ಲೊಯೋಲ ವಿಕಾಸ ಕೇಂದ್ರದವರು ಮೆಡಿಕಲ್ ಕಿಟ್ ಗಳನ್ನು ತಾಲೂಕು ಆಸ್ಪತ್ರೆಗೆ ನೀಡಿದರು

ಮೆಡಿಕಲ್ ಕಿಟ್ ನಲ್ಲಿ ಡಿಸಪೋಸೆಬಲ್ ಗೌನ್, N95ಮಾಸ್ಕ್, ಟೇಬಲ್ ಟಾಪ್ ಆಕ್ಸಿಮೀಟರ್, ಸ್ಯಾನಿಟೈಸರ್ ಹಾಗೂ ವಿವಿಧ ಮಾತ್ರೆಗಳಿವೆ. 

ಫಾ.ಫ್ರಾನ್ಸಿಸ್ ಮೆನೆಜಿಸ್ ಮಾತನಾಡಿ, ಕೋವಿಡ್ ನಿಯಂತ್ರಣದಲ್ಲಿ ತಾಲೂಕು ಆಡಳಿತದ ಕಾರ್ಯ ಶ್ಲಾಘನೀಯವಾಗಿದೆ. ಲೊಯೋಲ ವಿಕಾಸ ಕೇಂದ್ರವೂ, ಕೋವಿಡ್ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುತ್ತಿದೆ. ಸಂಕಷ್ಟದಲ್ಲಿರುವರಿಗೆ ಸಹಾಯ ಮಾಡುವುದೇ ಸಂಸ್ಥೆಯ ಗುರಿಯಾಗಿದೆ ಎಂದರು.
ಡಾ.ಎಚ್.ಎಫ್.ಇಂಗಳೆ ಕೋವಿಡ್ ಕಿಟ್ ಸ್ವೀಕರಿಸಿ, ಸಂಸ್ಥೆಯ ಕಾರ್ಯಕ್ಕೆ ಧನ್ಯವಾದ ಹೇಳಿದರು.
ಫಾ.ಜೆರಾಲ್ಡ್ ಡಿಸೋಜ, ಕೆನನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.