Ticker

6/recent/ticker-posts

ಹೃದಯಾಘಾತದಿಂದ ಸಾವು..

ಮುಂಡಗೋಡ:ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ, ಸುಭಾಷ್ ವಡ್ಡಟ್ಟಿ( 47) ಶನಿವಾರ ಹೃದಯಾಘಾತದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.





ಮೃತ ಇಂಜಿನಿಯ್ ಮೂಲತಃ ಮುಂಡರಗಿ ತಾಲೂಕಿನ ವಡ್ಡಟ್ಟಿ ಗ್ರಾಮದವರು.
 ಕೆಲ ದಿನಗಳ ಹಿಂದೆಯಷ್ಟೇ, ಇವರ ತಂದೆ ಅನಾರೋಗ್ಯದಿಂದ ಹುಬ್ಬಳ್ಳಿ ಕಿಮ್ಸ್ ನಲ್ಲಿ ಮೃತಪಟ್ಟಿದ್ದರು. ತಂದೆಯ ಸಾವಿನ ಸುದ್ದಿಯನ್ನೂ, ಇಂಜಿನಿಯರ ಸುಭಾಷ್ ಅವರಿಗೆ ಕುಟುಂಬಸ್ಥರು ತಿಳಿಸಿರಲಿಲ್ಲ. ಅವರು ಚೇತರಿಸಿಕೊಂಡು ಬಂದ ನಂತರ, ತಂದೆಯ ಸಾವಿನ ವಿಷಯ ಹೇಳಬೇಕೆಂದಿದ್ದ ಕುಟುಂಬ ಸದಸ್ಯರಿಗೆ, ಬರಸಿಡಿಲಿನಂತೆ ಮತ್ತೊಂದು ಆಘಾತ ಎರಗಿದೆ.
ಮೃತ ಇಂಜಿನಿಯರ್ ಕಳೆದ ವರ್ಷವಷ್ಟೇ ಮದುವೆ ಆಗಿದ್ದರು. ಅವರ ಸಾವು ನಂಬಲು ಆಗುತ್ತಿಲ್ಲ ಎಂದು ಪಿ.ಡಬ್ಲೂ.ಡಿ ಯ ಸಹದ್ಯೋಗಿ ಸಿಬ್ಬಂದಿ ಕಣ್ಣೀರು ಹಾಕುತ್ತ ಹೇಳಿದರು.