Ticker

6/recent/ticker-posts

ಓಂ ಕೊರಗಜ್ಜ ಕಾಪುಲೇ "ನಾನು ನಿನ್ನ ನಂಬುತ್ತೇನೆ"


"ನಂಬಿಕೆ"ಎಂಬ ಪದ ಇದೆಯೆಲ್ಲ,ಬರಿ ಆ ಪದದ ಉಚ್ಛಾರಣೆಗೆ
ಎಷ್ಟೋ ದೇವರ ನಾಮದಷ್ಟು ಶಕ್ತಿ ಇದೆ.
ನಾವು ನಾಳೆ ಇರುತ್ತೇವೆ ಎಂಬ ಪದ ನಂಬಿಕೆಯಿಂದಲೇ 
ಇಂದು ಈ ಲೇಖನ ಬರಿಯುತ್ತಿದ್ದೇನೆ.ಮನುಷ್ಯ ಸಂಘಜೀವಿ,
ಅವನ ಬೌದ್ಧಿಕ ವಿಕಸನದೊಡನೆಯೇ ಅದು ಕೂಡ "ಅಸ್ಟ್ರಲೋ ಪಿಥಿಕಸ್"
ನಂತರದ ಹಂತಗಳಲ್ಲಿ ಅವನು ಪ್ರಕೃತಿಗೆ ಭಾವನೆಗಳ ಜೊತೆ ಪ್ರತಿಕ್ರಿಯಿಸಲು ಶುರು ಮಾಡಿದ.
ಮೆದುಳಿನ ಸಿಸಿಯು ಹೆಚ್ಚಾಗುತ್ತಾ ಹೋಯಿತು "ಓಕ್ಸಿಟೋಸಿನ್" ಎಂಬ ರಾಸಾಯನಿಕದ ಸ್ರವಿಕೆಯಿಂದ 
ಮೆದುಳಿನ "ಸ್ಟಿರಿಯಾಟಮ್" ಎಂಬ ಭಾಗದಲ್ಲಿ "ನಂಬಿಕೆ,ಸ್ನೇಹ,ಪ್ರೀತಿ"ಗಳೆಂಬ ಮಾಧುರ್ಯ ಹುಟ್ಟಿತು
ಹಾಗೆ ಈ ಅದೇ ರಾಸಾಯನಿಕದಿಂದ "ಅಮಿಗ್ಡಾಲಾ" ಎಂಬ ಭಾಗದಲ್ಲಿ ದ್ರೋಹವೂ ಹುಟ್ಟಿತು,ಭಯ ಹೆಚ್ಚಾಯಿತು,ಮನುಷ್ಯನ ನಂಬಿಕೆಯ 
ತೀವ್ರತೆಯನ್ನು ಮಾತ್ರ ಕಡಿಮೆ ಮಾಡಿಕೊಳ್ಳಲಿಲ್ಲ.
ಅದು ಶಕ್ತಿಯಂತೆ ಒಂದು ರೂಪದಿಂದ ಮತ್ತೊಂದಕ್ಕೆ ಬದಲಾವಣೆ ಹೊಂದಿತು.
"ನಂಬಿಕೆ ಯಾವತ್ತಿದ್ದರೂ ಒಂದು ರೂಪದಿಂದ ಇನ್ನೊಂದು ರೂಪದಕ್ಕೆ ಬದಲಾವಣೆಯಾಗುತ್ತದೆ."
ಹೊರತು ಅದು ಸಾಯುವುದಿಲ್ಲ,ಮನುಷ್ಯ ನಂಬಿದ ಮೊದಲ ಪ್ರಾಣಿ ನಾಯಿ,ಈಗಲೂ ಕೂಡ ನಿಷ್ಠೆಗೆ
ಹೆಸರುವಾಸಿ ಅದೇ ನೋಡಿ ನಮ್ಮ ಭಾವನೆಗಳ ಶಕ್ತಿ.
ಅದು ಯಾವುದೇ ನಂಬಿಕೆಯಾಗಲಿ ಒಳ್ಳೆಯದೋ,ಕೆಟ್ಟದ್ದೋ ನಮ್ಮೆಲ್ಲ ಸಂಬಂಧಗಳು ಕೊನೆಯಾದರೂ
ನಾವಾಗೇ ಬೇಡ ಎಂದು ತಳ್ಳುವ ತನಕ ಆ ನಂಬಿಕೆ ನಮ್ಮ ಚಿರಸಂಗಾತಿ.
ನಂಬಿಕೆಯಿಲ್ಲದಿದ್ದರೆ ಯಾರೂ ಯಾರನ್ನೂ ಪ್ರೀತಿಸುವುದಿಲ್ಲ,ಆದರೆ ಅದೆ ನಂಬಿಕೆಗೆ ಪ್ರತಿಯಾಗಿ ಉಪಕಾರ 
ಬಯಸುವ ಜನರೇ ಹಲವರು,ಎಲ್ಲೋ ಒಂದು ಕಡೆ ನೀನು "ಹಾಗೆ ಆಗುತ್ತೀಯ!"ಅಂತ ನಿರೀಕ್ಷೆಯಿಲ್ಲದ ತಾಯಿಯು,
"ನಿನ್ನ ಮೇಲಿನ ನಂಬಿಕೆಯಿಂದನೇ ನನ್ನ ಬ್ಯೂಸಿನೆಸ್ ಬಿಟ್ಟುಕೊಟ್ಟೆ"ಎಂಬ ಹತಾಷೆಯಿರದ ತಂದೆಯು,"ನಿನ್ನ ನಂಬಿ ನಿನಗೆ
ನಾನು  ಅದನ್ನು ಮಾಡಿದೆ,ಇದನ್ನು ಮಾಡಿದೆ"ಎಂದು ಅಭದ್ರತೆಯನ್ನು ತೋರುವ ಮನಸಿರದ,ಸ್ಫಟಿಕದಂತಹ ಪ್ರೇಮಿ/ಪ್ರೇಯಸಿಯೂ ಸಿಗುತ್ತಾರೆ,ಸಿಕ್ಕವರದು ಅದೃಷ್ಟ,ಹಾಗೆ ಇರುತ್ತಾರೆ ಎನ್ನುವುದೂ ಒಂದು ನಂಬಿಕೆ.
ಅವರು ತನ್ನ ಕಣ್ಣಮುಂದೆ ಇರುವ ವ್ಯಕ್ತಿಯ ನಂಬಿಕೆಯನ್ನು ಗೌರವಿಸುವುದರಲ್ಲೇ ಜೀವನ ಕಳೆಯುತ್ತಾರೆ.



ಇರಲಿ ಈಗ ಒಂದು ಕಥೆ ಹೇಳುತ್ತೇನೆ,ಆ ಪರಶಿವನು ಭೂಮಿಗೆ ಬಂದು ತನಗೆ ಮೋಸ ಬಗೆದವರಿಗೆಲ್ಲ ಇಂದಿಗೂ ಒಳ್ಳೆಯದನ್ನ ಮಾಡುತ್ತಿರುವ ಕಥೆ.
ನಮ್ಮ ತುಳುನಾಡನ್ನು ಆಳುಪರು ಆಳುತ್ತಿದ್ದ ಕಾಲ,ಒಮ್ಮೆ ಪರಶಿವನ ವರದಿಂದ ಕೊರಗ ಜಾತಿಯ ಓಡಿ ಮತ್ತು ಅಚ್ಚುಮೈರೆ
ಯಲ್ಲಿ ಹುಟ್ಟಿದ ಪರಶಿವ"ತನಿಯ" ಎಂದು ಅವನ ಹೆಸರು.
ಬೆಳೆಯುತ್ತಾ ಮೂವತ್ತು ದಿನದೊಳಗೆ ತನ್ನ ಇಡೀ ಕುಲವನ್ನು ಕಳೆದುಕೊಂಡ ಅವನಿಗೆ

ಮೈರಕ್ಕೆಯೆಂಬ ಮಹಿಳೆ ತಾಯಿಯಾಗಿ ತನ್ನಿಬ್ಬರು ಮಕ್ಕಳೊಂದಿಗೆ ಸಾಕುತ್ತಾಳೆ,ಮೊದಲು ವಿಧಿಯಿಂದ ಮೋಸ ಹೋದ ಹುಡುಗ ಅನಾಥ ಪ್ರಜ್ಞೆ ಮರೆತು ಮೈರಕ್ಕೆಯ ಎಲ್ಲ ರೀತಿಯ ಕೆಲಸಗಳಿಗೂ ಆಧಾರವಾಗಿ ನಿಲ್ಲುತ್ತಾನೆ.
ಮೈರಕ್ಕೆಯ ಪ್ರೀತಿಯ ಮಗನಾಗುತ್ತಾನೆ,ಸಾವಿರ ಬುಟ್ಟಿಯನ್ನು ದಿನಕಳೆಯೊದರೊಳಗೆ ಹೆಣೆದಿದ್ದು,ಕದಿರೆಯ ಮಂಜುನಾಥನಿಗೆ ಅಸಾಧ್ಯವಾದ ಕಂಚಿನ ಪಂಡಿಕೆಯನ್ನು ಹೊತ್ತು ಒಯ್ದಿದ್ದು(ಕಂಚಿನ ಪಂಡಿಕೆ ಹೊರಲು ಏಳು ಜನ ಬೇಕು)
ಹೀಗೆ ಅನೇಕಾನೇಕ ಪವಾಡಗಳನ್ನು,ಜಾರಂದಾಯ ಮತ್ತು ಬಂಟ ದೈವಗಳ ಅಣತಿ ಮೇಲೆ ಕೈಯಲ್ಲಿ ಎತ್ತಿನ ಮಾಂಸ ಹಿಡಿದು ಅರಸು ದೈವಗಳನ್ನು ಓಡಿಸಿದ್ದು,ತನಗೆ ಕ್ಷೇತ್ರಗಳನ್ನು ಕಲ್ಪಿಸಲು ಕೇಳಿದಾಗ ಜಾರಂದಾಯ,ಬಂಟ ದೈವಗಳು ಅಸ್ತು ಎಂದು ತುಳುನಾಡಿನಲ್ಲಿ ಏಳು ಕ್ಷೇತ್ರಗಳನ್ನು ಕೋಲ,ಅಗೆಲ ಸೇವೆಯನ್ನು ನೀಡಿದ್ದು ಅವನ ಶಕ್ತಿಯ ಸಾಕ್ಷಿ.
ಪರಮಾತ್ಮನೇ ಧರೆಗಿಳಿದು ಬಂದಿದ್ದು ಕಂಡರೂ ತಿಳಿಯದ ಮೂಢ ಜನ,ಅವನಿಂದ ಫಲ ಪಡಿದ ಊರಿನ ಜನವೇ ಅವನ
ಅಂತ್ಯಕ್ಕೆ ಕಾರಣರಾಗುತ್ತಾರೆ,ತನ್ನ ತಾಯಿಗೆ ಪ್ರಿಯವಾದ ಮಾದಲದ ಹೂವನ್ನು ಹರಿಯಲು ಗೋಪುರದ ಮೇಲೆ ಕಾಲಿಟ್ಟಿದ್ದಕ್ಕೆ ಅವನು ಮಾಯವಾದ ಎನ್ನುತ್ತಾರೆ,ಆದರೆ ಊರಿನ ಮೇಲ್ಜಾತಿ ಜನ ಉಪಕಾರ ಮಾಡಿದವನನ್ನ ಅಪಕಾರ ಮಾಡಿ ಕೊಲ್ಲಲು ಬಂದಾಗ ಪರಶಿವ ಮಾಯವಾಗಿ ತನ್ನ ಶಕ್ತಿಯನ್ನು ಅವರ ಅಜ್ಞಾನವನ್ನು ಅವರು ನಂತರ ಅನುಭವಿಸಿದ ನೋವಿಂದ ಅವನ ಇರುವಿಕೆಯನ್ನೂ ತೋರಿದ.
ಇಂದಿಗೂ "ಅಜ್ಜ"ನಿಗೆ ಕಷ್ಟ ತಪ್ಪಿತೇ?ಅದ್ಯಾರೋ ಅನ್ಯಮತೀಯರು ಸನ್ನಿಧಾನದಲ್ಲಿ ಕೆಟ್ಟದ್ದನ್ನು ಮಾಡಿ ಶಿಕ್ಷೆ ಅನುಭವಿಸಿ ಅಜ್ಜ ಎಂದಾಗ ಅಜ್ಜ ಅವರ ನೋವನ್ನು ನೀಗಿಸಿದ,ಸೇಂದಿ,ಬೀಡಿ,ಚಕ್ಕುಲಿ,ಎಲೆ ಅಡಿಕೆಯ ಪ್ರಿಯ ಕೊರಗಜ್ಜ ಸ್ವಾಮಿ
ಪಾಡ್ದನದಲ್ಲಿ ತನ್ನ ಕಥೆ ಹೇಳುವಾಗ ಕಣ್ಣೀರಾಗಿಸಿಬಿಡುತ್ತಾನೆ,ಏಳು ಕೊಪ್ಪದ ಕೊರಗರಿಗೆ ಆದ ಮೇಲ್ಜಾತಿಯವರ ತೊಂದರೆಗಳು,ವಿಧಿಯ ಲೀಲೆ,ತಾನು ಉಪಕಾರ ಮಾಡಿದ ಜನರಿಂದ ತನಗೆ ನೋವು ಎಲ್ಲ ಆದ ಮೇಲೂ ಕೂಡ ಇನ್ನು
ಮನುಷ್ಯ ಜಾತಿಯನ್ನ ಮಾತ್ರ ಮನಗಂಡು ಕಷ್ಟ ಎಂದು ಬಂದವರು ಧರ್ಮ ಮಾರ್ಗದಲ್ಲಿದ್ದರೆ ಉಪಕಾರ ಮಾಡುತ್ತಾನೆ,ಅಪಕಾರ ಮಾಡಿದವರಿಗೆ ತಿದ್ದಿ ಬುದ್ಧಿ ಹೇಳುತ್ತಾನೆ.
ಜಗತ್ತು ಹಲವು ಮಾನವತಾವಾದಿಗಳನ್ನ ಕಂಡಿರಬಹುದು,ಆದರೆ ಕೊರಗಜ್ಜನ ಮೂಲಕ ತುಳುನಾಡಿನಲ್ಲಿ ಆದ ಸಾಮಾಜಿಕ ಕ್ರಾಂತಿ ಅಚಂದ್ರಾರ್ಕವಾಗಿ ಮುಂದುವರೆದಿದೆ,ಮುಂದುವರೆಯುತ್ತದೆ.
ಜನ ಮೂಲೆ ಮೂಲೆಯಿಂದ ಬರುತ್ತಾರೆ,ಯಾವ ಸಂಬಂಧವೂ ಅವರಿಗೆ ಕೊರಗಜ್ಜನ ಜೊತೆ ಇರುವುದಿಲ್ಲ,ಯಾವ ಉಪಕಾರವನ್ನೂ ದೈವವಾದ ಕೊರಗಜ್ಜ ಬಯಸುವುದಿಲ್ಲ.
ಎದುರಿಗಿರುವ ಮನಸಿನ ನಂಬಿಕೆಗೆ ಮಾತ್ರ ಬೆಲೆ ನೀಡಿ ಪ್ರತ್ಯುಪಕಾರ ಬಯಸದ
"ಕೊರಗಜ್ಜ"ಸ್ವಾಮಿ ಜಗತ್ತಿಗೆ ಒಬ್ಬನೇ ಒಬ್ಬ