Ticker

6/recent/ticker-posts

ಉತ್ತರ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ:ಸಚಿವ ಹೆಬ್ಬಾರ್

ಮುಂಡಗೋಡ:'ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಇಲ್ಲ. ಈಗಾಗಲೇ ಕಾರವಾರದಲ್ಲಿ 6kl ಸಾಮರ್ಥ್ಯದ ಆಕ್ಸಿಜನ್ ಘಟಕ ನಿರ್ಮಾಣ ಹಂತದಲ್ಲಿದ್ದು, ಇನ್ನೊಂದು ವಾರದಲ್ಲಿ ಮುಕ್ತಾಯ ಆಗುವ ವಿಶ್ವಾಸವಿದೆ' ಎಂದು ಕಾರ್ಮಿಕ  ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಮುಂಡಗೋಡದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.


ಮುಂಡಗೋಡ ತಾಲೂಕು ಆಸ್ಪತ್ರೆಗೆ ಎರಡು ಆಂಬುಲೆನ್ಸ್ ಗಳನ್ನು ನೀಡಿದ್ದು, ಅವುಗಳನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್  ಶನಿವಾರ ಸೇವೆಗೆ ಚಾಲನೆ ನೀಡಿದರು

ಜಿಲ್ಲೆಯ ಕೋವಿಡ್ ನಿರ್ವಹಣೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರೂ ಕೈಜೋಡಿಸಿದ್ದು, ಮೆಡಿಕಲ್ ಆಕ್ಸಿಜನ್ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಅವರಿಗೆ ಸರ್ಕಾರ ಹಾಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.


ಈಗಾಗಲೇ ಯಲ್ಲಾಪುರದಲ್ಲಿ ಆಕ್ಸಿಜನ್ ಘಟಕ ಕಾರ್ಯಾರಂಭ ಮಾಡಿದ್ದು, ಶಿರಸಿ ಹಾಗೂ ಭಟ್ಕಳದಲ್ಲಿಯೂ ಆರಂಭವಾಗಲಿದೆ. ದಾಂಡೇಲಿಯಲ್ಲಿಯೂ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೆಡಿಕಲ್ ಆಕ್ಸಿಜನ್ ತಯಾರಿಸಿದರೆ, ಜನರಿಗೆ ಸರ್ಕಾರಿ ಆಸ್ಪತ್ರೆ ಮೇಲೆ ಇನ್ನೂ ಹೆಚ್ಚಿನ ಭರವಸೆ ಮೂಡಲು ಸಹಕಾರಿ ಆಗುತ್ತದೆ. ಹೈಟೆಕ್ ಆಸ್ಪತ್ರೆ ಇಲ್ಲದಿದ್ದರೂ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳನ್ನೇ ಹೈಟೆಕ್ ಮಾಡಲಾಗುವುದು ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.