Ticker

6/recent/ticker-posts

ತಂತ್ರ ಮತ್ತು ತಪ್ಪು ತಿಳುವಳಿಕೆ.

ತಂತ್ರ ಭಾರತದ ಅಧ್ಯಾತ್ಮ ನೀಡಿದ ಅತ್ಯದ್ಭುತ ಕೊಡುಗೆ!ರಾಜಸ್ಥಾನದ ಬೀದಿ ಬೀದಿಯಲ್ಲಿ ನಡೆಯುವ ಮೋಡಿವಿದ್ಯೆಗಾರರ ಕೈಚಳಕವನ್ನು ನೋಡಿ ದಿಗ್ಭ್ರಮೆಗೊಂಡ ಬ್ರಿಟಿಷರು ತಂತ್ರದ ಮೇಲೆ ಒತ್ತಡ ಹೇರಿದ್ದರಂತೆ.


ಅತ್ಯಂತ ದುರ್ಗಮ ದಾರಿಯಾದ ಇದರಲ್ಲಿ ಸಾಗಬೇಕೆಂದರೆ ಗಟ್ಟಿ ಗುಂಡಿಗೆ ಬೇಕು ಇಲ್ಲದಿದ್ದರೆ ಹುಚ್ಚು ಹಿಡಿಯಬಲ್ಲದು,ಸಾಯಲೂ ಬಹುದು.



ತಂತ್ರದ ಮೂಲ ಶಿವ-ಶಕ್ತಿ,ಅದನ್ನು ವಿಷ್ಣು-ಲಕ್ಷ್ಮಿ ಎಂದು ಸಹ ಎನ್ನಬಹುದು. ಮಾಂತ್ರಿಕ ವಿದ್ಯೆಯ ಬಗ್ಗೆ ಇರುವ ರಹಸ್ಯಮಯ ವಿಚಾರಗಳನ್ನು ಶ್ರೀಚಕ್ರದಲ್ಲಿ ಕೇಂದ್ರಿಕರಿಸಲಾಗಿದೆ. ಮಧುರೈಯಲ್ಲಿ ಮೀನಾಕ್ಷಿಯನ್ನು ಪಗಡೆಯಾಡಲು ಆಮಂತ್ರಿಸಿ ಅವಳನ್ನು ಸೋಲಿಸಿ ಶ್ರೀ ಚಕ್ರದಲ್ಲಿ ಬಂಧಿಸುತ್ತಾರೆ ಶಂಕರರು.ಅವರ ಷರತ್ತಿನ ಮೇಲೆ ತಾಮಸ ಆಹಾರ ಪ್ರಿಯೆಯಾದ ಅವಳು ಸಾತ್ವಿಕ ಆಹಾರ ಸ್ವೀಕರಿಸಲಿಕ್ಕೆ ಶುರು ಮಾಡ್ತಾಳೆ.

ಶ್ರೀ ಚಕ್ರದಲ್ಲಿರುವ ದೇವತೆ ಶ್ರೀ ವಿದ್ಯ ಅಥವಾ ಶ್ರೀ ಲಲಿತಾ.

ವಿದೇಶಿ ಕಣ್ಣುಗಳು ನಮ್ಮ ವಿದ್ಯೆಗಳ ಮೇಲೆ ಬಿದ್ದು ಅದು ವಿಕಾರಗೊಂಡ ತರುವಾಯ,ಕಾಳಾಮುಖದ ಸಿದ್ದರು ತಮ್ಮ ಅನೈತಿಕ ಕೆಲಸಗಳಿಗೆ ತಂತ್ರದ ಲೇಬಲ್ ಹಚ್ಚಿದ ನಂತರ ತಂತ್ರದ ಸಾರವಾದ "ಪಂಚಮಕಾರ"ಗಳು ತಮ್ಮ ಅಸ್ತಿತ್ವ ಕಳೆದುಕೊಂಡವು.ಕೇವಲ ತಮ್ಮ ಹೆಸರಿನ ಅರ್ಥ ಉಳಿಸಿಕೊಂಡವು.ಆಮೇಲಿಂದ ಮಾಂತ್ರಿಕ ಜಗತ್ತು "ಅಡ್ಡಾ" ಆಗಿ ರೂಪಾಂತರ ಗೊಂಡಿದ್ದು ವಿಪರ್ಯಾಸ.


ಈಗಲೂ ಕೂಡ ಇಲ್ಲಿ ವಿದೇಶದಿಂದ ಬರುವವರು ಮದ್ಯ,ಮಾಂಸ ತಿಂದು ಮಜಾ ಮಾಡಿ ಸೆಕ್ಸ್ ಅನ್ನು ಸಾಧನ ಮಾರ್ಗ ಅಂದುಕೊಂಡು ಗಾಂಜಾ ಹೊಡೆದು ಮಜಾ ಮಾಡುತ್ತವೆ ಹೊರತು,ಬೆರಳಣಿಕೆಯ ಸಾಧಕರನ್ನು ಬಿಟ್ಟರೆ ನಮ್ಮ ಗ್ರಂಥಗಳನ್ನು ತಿರುಚಿದ ರೀತಿಗೆ,ಕೆಲ ನಮ್ಮವರದೇ ಸ್ವಾರ್ಥಕ್ಕೆ ಬಲಿಯಾದ ಈ ಸಿದ್ಧಿ ಮಾರ್ಗ ವಿದೇಶಿಗರಿಗೆ "ಓಪನ್ ಪಬ್" ನ ಸಮಾನ!


ನಮ್ಮ ಸಂಸ್ಕೃತಿ ಮಾತೃ ಪ್ರಧಾನ ಸಂಸ್ಕೃತಿ,ದ್ರಾವಿಡರ ಆದಿ ಅಂತ್ಯಕ್ಕೂ ನಮಗೆ ಆಸರೆಯಾಗುವ ಎಲ್ಲ ಪ್ರಕೃತಿಯನ್ನೂ ದೇವರೆಂದು ತಿಳಿದು ಪೂಜಿಸಿದ್ದೇವೆ ಹೆಸರು ಕೊಟ್ಟಿದ್ದೇವೆ. ಮಾತಂಗಿ,ವಾರಾಳಿ,ನಾರಸಿಂಹಿ,ಬ್ರಹ್ಮಚಾರಿಣಿ,ಧೂಮಾವತಿ,ಕರಿಯಮ್ಮ,ಕಾಳಮ್ಮ,ಚೌಡಿ,ಮಾರಿ,ಪ್ರತ್ಯಂಗೀರ,ಛಿನ್ನಮಸ್ತಾ,ಬಗಲಾಮುಖಿ ಇತ್ಯಾದಿ ಸ್ತ್ರೀ ರೂಪಗಳು ತಂತ್ರಾಗಮದ ಜೀವವಾಗಿವೆ,ಇವಕ್ಕೆಲ್ಲ ಪಂಚಮಕಾರದ ಸೇವೆಯೆಂದು ನಾವುಗಳು ಮಾಡುತ್ತಿರುವ ಆಚರಣೆಗೆ ಹುರುಳಿಲ್ಲ ಅದರ ತಾತ್ವಿಕ ಅರ್ಥ ತಿಳಿದುಕೊಳ್ಳಬೇಕಲ್ಲವೇ?ನಮ್ಮ ಎಲ್ಲ ಗ್ರಂಥಗಳಿಗೂ ಗುಹ್ಯ,ಸಮಾಧಿ,ದರ್ಶನ ಭಾಷೆಗಳಿವೆ.


ಅದರ ಪ್ರಕಾರ ಪಂಚಮಕಾರದ ಬಗ್ಗೆ ಹೇಳಬೇಕೆಂದರೆ


ಮದ್ಯ:-ಚಂದ್ರಮಂಡಲ ಸ್ಥಿತಳಾದ ಮಾತೆ ಸಕಲ ವನಸ್ಪತಿಗಳ ಒಡತಿ ನಮ್ಮ ಮೆದುಳಿನಲ್ಲಿರುವ ಡೊಪಮೈಸ್,ಸೆರೆಟೋನಿನ್,ಆಕ್ಸಿಟೋಸಿನ್,ಎಂಡೋಫ್ರಿನ್ಗಳ ಸಮತೋಲನ ಯಾವಾಗ ಸಾಧ್ಯವಾಗುವುದೋ 

ಆಗ ನಾವು ಅನುಭವಿಸುವ ಆನಂದ ಬ್ರಹ್ಮಾನಂದ.

ಇದನ್ನೆ ಆಗಾಗ ಪ್ರಚೋದಿಸಲು ನಾವು ಮದ್ಯ,ಗಾಂಜಾ,ಮೈಥುನ್ಯದ ಮೊರೆ ಹೋಗುತ್ತೇವೆ.ಆದರೆ ಮದ್ಯದ ನಿಜವಾದ ಅರ್ಥ ನಮ್ಮ  ಮೆದುಳಿನ ರಾಸಾಯನಿಕ ಗ್ರಂಥಿಗಳ ಸಮತೋಲನ ಮತ್ತು ಅಮೃತತುಲ್ಯವಾದ ಆನಂದದ ಅನುಭವ ಅಷ್ಟೇ.


ಮಾಂಸ:-ಮಾಂಸಕ್ಕೆ ಸಸ್ಯದ ತಿರುಳು,ಬೆಣ್ಣೆ,ತುಪ್ಪ ಇತ್ಯಾದಿ ಅರ್ಥಗಳ ಜೊತೆ ಮಾತಿನ ನಿಯಂತ್ರಣ ಎಂಬ ಅರ್ಥವೂ ಇದೆ ಸದಾಶಿವ ಬ್ರಹ್ಮೇಂದ್ರರು,ರಮಣರು,ಶ್ರೀಧರರು ಅನಾವಶ್ಯಕವಾಗಿ ಹರಟಿದ್ದನ್ನು ನೋಡಿದ್ದೀರ?ಯಾವ ಪ್ರಮಾಣದಲ್ಲಿ?ಯಾರೊಟ್ಟಿಗೆ?ಯಾವ ರೀತಿ?ಯಾವ ಭಾಷೆಯಲ್ಲಿ?ಮಾತಾಡಬೇಕು ಎಂಬ ನಿಯಂತ್ರಣವೇ ಮಾಂಸ.


ಮತ್ಸ್ಯ:-ನಮ್ಮಲ್ಲಿರುವ ನಾಡಿಗಳು(ಇಡಾ,ಪಿಂಗಳ)ನಿಯಂತ್ರಣವನ್ನು ಪ್ರಾಣಾಯಾಮದ ಮೂಲಕ ಸಾಧಿಸಿವುದೇ ಮತ್ಸ್ಯ.

ಮನುಷ್ಯ ಕಲಿಯಬೇಕಾದ ಮೊದಲ ಪಾಠ ಉಸಿರಾಡುವುದು ಅದು ಗೊತ್ತಾದರೆ ಸಾಕು! ಎಷ್ಟು ನಮ್ಮ ಉಸಿರಿನ ಮೇಲೆ ನಿಯಂತ್ರಣವಿದೆಯೋ ಜೀವದ ಮೇಲೂ ಅಷ್ಟೇ ನಿಯಂತ್ರಣವಿರುತ್ತದೆ.


ಮುದ್ರಾ:-ಮುದ್ರೆಗಳಿಗೆ ವಿಶೇಷ ಸ್ಥಾನಮಾನವಿದೆ,ಚೀನಾದ ಆಕ್ಯೂಪಂಚರ್ ನಂತಹ  ಪದ್ಧತಿಗಳ ಬಗ್ಗೆ ಕೇಳಿದ್ದೀರಲ್ಲವೇ,ನಮ್ಮ ದೇಹದ ಭಾಗಗಳಿಗೆ ಮಸಾಜ್ ಮಾಡಿದಾಗ ಆಗುವ ಅನುಭವ ಗೊತ್ತಲ್ಲವೇ?ಅದೆಲ್ಲ ಅನುಭವವನ್ನು ತಕ್ಕ ಮಟ್ಟಿಗೆ ನಮ್ಮ ಕೈಯಲ್ಲಿನ ಮುದ್ರೆಗಳ ಮೂಲಕವೇ ಪಡೆಯಬಹುದು,ಆ ರೀತಿ ಮುದ್ರೆಗಳ ವಿದ್ಯೆಯಲ್ಲಿ ಪರಿಣಿತಿ ಹೊಂದುವ ಭಾಗ ಇದು.


ಮೈಥುನ್ಯ:-ಮೈಥುನ್ಯ ಎಂದರೆ ಖಂಡಿತ ಸೆಕ್ಸ್ ಅಲ್ಲ,ಹೆಣ ಅಥವಾ ಹೆಣ್ಣನ್ನು ಭೋಗಿಸುವ ಕಲೆಯೂ ಅಲ್ಲ.ಮೈಥುನ್ಯವೆಂದರೆ ವ್ಯಕ್ತ ಜೀವ/ಚೈತನ್ಯ/ಪ್ರಕೃತಿ/ಶಕ್ತಿಯನ್ನು ದೇವ/ಪರಮಾತ್ಮ/ಪುರುಷ/ಶಿವನಲ್ಲಿ ಸೇರಿಸುವ ವಿದ್ಯೆ,ಅಷ್ಟ ಚಕ್ರವನ್ನೂ ಪ್ರವಹಿಸುವಂತೆ ಮಾಡಿ ನೆತ್ತಿ ಮೇಲಿರುವ ಸಹಸ್ರಾರದ ಮೂಲಕ ನಮ್ಮ ಆತ್ಮವನ್ನು ಪರಮಾತ್ಮನಲ್ಲಿ ಸೇರಿಸುವುದೇ ಮೈಥುನ್ಯ.

ಆತ್ಮ ಹರಿದು ಹೋಗಿ ಹರಿಯ ಹರಿವಿನಲ್ಲಿ ಒಂದಾಗುವುದು.

ಇದನ್ನ ಅಪಾರ್ಥ ಮಾಡಿಕೊಂಡು ಮಾಂತ್ರಿಕ ಪದ್ಧತಿ ಅಧೋಮುಖಕ್ಕೆ ಹೊರಟಿದ್ದು,ಮತ್ತೆ ಸನ್ಮಾರ್ಗ ಈ ಪದ್ಧತಿಗೆ ಎಂದು ಸಿಗುವುದೋ?!

ಅಂಕಣಕಾರರು
ನಿಖಿಲ್ ಎ ಬಿ -ಮುಂಡಗೋಡ