ಮನಸಿನಂತೆ ಮಹಾದೇವ ಎನ್ನುತ್ತಾರೆ ಹಿರಿಯರು,ಈ ಜಗತ್ತಿನ ಯಾವುದೇ ಕೆಲಸ ಕೂಡ ನಮ್ಮ ಆತ್ಮಸ್ಥೈರ್ಯದ ಮುಂದೆ
ಅಸಾಧ್ಯವಲ್ಲ!ಈ ಖಾಯಿಲೆಯಿಂದ ಗುಣಮುಖವಾಗುವುದೂ ಕೂಡ.
"ಯದ್ಭಾವಂ ತದ್ಭವತಿ","ಮನನಾತ್ ತ್ರಾಯತೇ
ಮಂತ್ರಂ" ಇತ್ಯಾದಿ ಉಲ್ಲೇಖಗಳು ನಾವೆಣಿಸಿದಂತೆಯೇ ನಾವು ರೂಪುಗೊಳ್ಳುತ್ತೇವೆ ಎಂಬುದರ ಸಂಕ್ಷಿಪ್ತ
ಟಿಪ್ಪಣಿ.
ಬೃಹದಾರಣ್ಯಕವೂ ಕೂಡ ನೀವು ಏನನ್ನು ಭಾವಿಸುತ್ತಿರೋ ಅದೇ
ಆಗುತ್ತೀರ ಎನ್ನುತ್ತದೆ.
ಹಾಗಿದ್ದ ಮೇಲೆ ರೋಗಗಳು ಮತ್ತದರಿಂದ ಗುಣಮುಖರಾಗುವುದು
ಕೂಡ ನಮ್ಮ ಮನೋಬಲದ ಮೇಲೆ ನಿಂತಿದೆ.
ಇದು ಸುಳ್ಳಲ್ಲ!ಒಂದು ಉದಾಹರಣೆ ಕೊಡುತ್ತೇನೆ
ನೀವು ಯಾವುದಾದರೂ ವೈದ್ಯರನ್ನು ನಿಮ್ಮ ಪಾರಿವಾರಿಕ ವೈದ್ಯರು
ಎಂದು ಪರಿಗಣಿಸಿದಾಗ ಅವರು
ನಿಮಗೆ ಪ್ಯಾರಾಸಿಟಮಲ್ ಪ್ಯಾಕೇಟ್ ಅಲ್ಲಿ ಶುಂಠಿ ಪೇಪ್ಪರ್
ಮೆಂಟ್ ಹಾಕಿಕೊಟ್ಟರು ನಿಮಗೆ ಜ್ವರದಿಂದ
ಮುಕ್ತಿ ಸಿಗುತ್ತದೆ,ಯಾಕೆಂದರೆ ನಿಮ್ಮ ಮನಸು ಅವರನ್ನು
ನಂಬುತ್ತದೆ,ಆ ನಂಬುಗೆಯಿಂದಲೇ ಮನಸ್ಸು
ದೇಹಕ್ಕಾದ ಘಾಸಿರನ್ನು ಶುಶ್ರೂಷೆ ಮಾಡುತ್ತಾ ಸಾಗುತ್ತದೆ.
ಇದಕ್ಕೆ ವೈಜ್ಞಾನಿಕ ಪರಿಭಾಷೆಯಲ್ಲಿ "placebo
effect" ಎನ್ನುತ್ತೇವೆ.
ಇದರ ಹಲವು ಗ್ರಾಹಕರಲ್ಲಿ ನಾವು ನೀವು ಎಲ್ಲರೂ ಭಾಗವಾಗಿದ್ದೇವೆ.
ಆಶ್ಚರ್ಯವಾದರೂ ಇದು ಸತ್ಯ!ಇನ್ನೂ ಈ ಕೋವಿಡ್ ಕಾಲಘಟ್ಟದಲ್ಲಿ
ಕೊಡಲಾಗುತ್ತಿರುವ ಐದು ಚಿಲ್ಲರೆ
ಮಾತ್ರೆಗಳು ಸಾಮಾನ್ಯ ವೈದ್ಯಕೀಯ ವಿದ್ಯಾರ್ಥಿಗೂ ತಿಳಿಯುವ
ಹಾಗೆ ಒಂದು "viral fever"ಗೆ ಕೊಡಲಾಗುವ ಔಷಧಿಗಳು.
Who ದಂತಹ ಜಾಗತಿಕ ಸಂಸ್ಥೆಯೇ ವ್ಯಾಕ್ಸಿನ್ ಮತ್ತು ಮಾತ್ರೆಗಳಿಗಿಂತ
ಮನೋಬಲ ಮುಖ್ಯ ಎಂದು ಹೇಳುತ್ತವೆ.
ಹಾಗಂತ ರೋಗಲಕ್ಷಣಗಳು ಕಂಡು ಬಂದಾಗ ಸಹ ಮನೆಯಲ್ಲಿದ್ದು
ವಾಸಿ ಆಗುತ್ತೇನೆನ್ನುವುದು ನಮ್ಮ ಮನೋಬಲಕ್ಕಿಂತ ಮೂರ್ಖತನ;ಟೆಸ್ಟ್ ಮಾಡಿದಾಗಲೂ ಕೊರೋನಾ ಕಂಡುಬಂದು
ನೀವು ಕ್ಷಿತಿಗೊಳ್ಳದೇ ಪರಿಸ್ಥಿತಿ ಎದುರಿಸಲು ತಯಾರಿದ್ದೀರೆಂದರೆ ನೀವೆ ನೋಡಿ ನಿಜವಾದ ಯೋಧ!
ಉದಾಹರಣೆ ನೀಡುತ್ತೇನೆ...
ನನ್ನ ಸ್ನೇಹಿತರ ತಮ್ಮನಿಗೆ ಕ್ಯಾನ್ಸರ್ ಇದ್ದಾಗ ಅವನು
ತನ್ನ ಔಷಧೋಪಚಾರದ ಜೊತೆ ದಿನವೂ ಕೂಡ "ಹನುಮಾನ್ ಚಾಲೀಸಾ"ಓದುತ್ತಿದ್ದ,ಹನುಮಾನ್ ಚಾಲೀಸಾದಿಂದಲೇ
ಅವನಿಗೆ ಗುಣವಾಗಲಿಲ್ಲ,ಆದರೆ ಮಾರಣಾಂತಿಕ ಖಾಯಿಲೆಯೊಡನೆ ಹೋರಾಡಲು ಹನುಮಾನ್ ಚಾಲೀಸಾ ಸಹಕಾರಿಯಾದದ್ದಂತೂ
ನಿಜ
ಇನ್ನೊಬ್ಬ ಸ್ನೇಹಿತ ಇದೇ ರೀತಿ ಕ್ಯಾನ್ಸರ್ ಇಂದ ಬಳಲಿದವ,
ಅವನು ಅಷ್ಟು ದಿನ ಒದ್ದಾಡಿ ಬದುಕಿದ್ದು ನನ್ನನ್ನು ನಾನು
ಒಂದು ದಿನ ಒಳ್ಳೆಯ ಅಧಿಕಾರಿ ಸ್ಥಾನದಲ್ಲಿ ನೋಡಬೇಕೆಂಬ
ಆಸೆಯಿಂದ ಎಂದಾಗ ಮೈಕೂದಲುಗಳು ನಿಮಿರಿಹೋಗಿದ್ದವು!
ಕೊರೋನಾ ರೋಗದಿಂದ ಮುಕ್ತವಾದವರ ಕಥೆ ಇದಕ್ಕಿಂತ ಭಿನ್ನವೇನಿಲ್ಲ.
ಮನಸು ಮಾಡಿದರೆ ಈ ರೋಗವನ್ನು ಮೆಟ್ಟಿ ನಿಲ್ಲಲು ನಮಗೆ ಮಹಾದಾರಿಗಳು ಸಿಗುತ್ತವೆ ಎನ್ನುವುದು ನಿಜ.
ಆದರೆ ಕೊರೋನಾ ರೋಗಿಗಳಿಗೆ ಕಾಡುತ್ತಿರುವುದು ಎರಡೇ ಎರಡು
ಮನೋವ್ಯಥೆಗಳು
ಒಂದನೇಯದು ಭಯ ಇನ್ನೊಂದು "withdrawal
syndrome".
ದಿ.ಅಶೋಕ್ ಪೈಯವರು ತಮ್ಮ ಅಧ್ಯಯನದ ಪ್ರಕಾರ ಮಂಡಿಸುವ
ವಿಚಾರವೇನೆಂದರೆ ಮನುಷ್ಯ
"ಒಂದು ದೃಶ್ಯದಲ್ಲಿ ನಾವು ವಿದ್ರಾವಕ ಅಥವಾ ಹಾಸ್ಯಮಯ
ಪಾತ್ರಗಳನ್ನು ಗಮನಿಸಿದಾಗ ಅದರ ಪರಿಣಾಮ
ನಮ್ಮ ಮೇಲೆ ಪರಿಣಾಮ ಬೀರುತ್ತದೆ".
ಉದಾ:- ನಾವು ಟಿವಿಯಲ್ಲಿ ಭಯಾನಕ ಚಿತ್ರ ನೋಡಿದಾಗ ಭಯ
ಬೀಳುವುದು, ನಮಗೆ ಸಂಬಂಧವೇ ಇಲ್ಲದ ಧಾರಾವಾಹಿಯಲ್ಲಿ ಯಾರೋ ಅಳುತ್ತಿರುವಾಗ ನಾವು ಅವರ ಮೇಲೆ ಮರುಕ
ಪಡುವುದು ಇತ್ಯಾದಿಗಳು
ಮನಸಿನ ಆಯಾಮವನ್ನು ನಮ್ಮ ಮುಂದೆ ತೆರದಿಡುತ್ತವೆ.
ಅದೇ ರೀತಿ ಒಂದೇ ಕೊಠಡಿಯಲ್ಲಿ ಇದ್ದ ಸಹರೋಗಿಗಳ ಆರೋಗ್ಯದಲ್ಲಿ
ವ್ಯತ್ಯಯವಾದಾಗ,ಅಥವಾ ಮರಣ ಹೊಂದಿದರು ಎಂದುಕೊಳ್ಳಿ ಅದು ನಮ್ಮ ಮೇಲೆ ಆ ಕ್ಷಣಕ್ಕೆ ಮಾಡುವ ಪರಿಣಾಮ
ಬಹು ದೀರ್ಘವಾಗಬಲ್ಲದು.
ಇದಕ್ಕೆ ಪರಿಹಾರವೇನು?ಎಂದು ಕೇಳಿದರೆ
ವೈಯಕ್ತಿಕವಾಗಿ ನನ್ನ ಸಲಹೆ "ಭಗವದ್ಗೀತೆ"ಯನ್ನು
ಓದಿ.
ಹೌದು ಈ ಕಾಲಘಟ್ಟದಲ್ಲಿ ಮನಸೇ ಅರ್ಜುನ,ಪ್ರಜ್ಞೆಯೇ ಕೃಷ್ಣ.
ಇದೇ ಪರಿಸ್ಥಿತಿ ಅಂದು ಅರ್ಜುನನಿಗೆ ಎದುರಾಗಿತ್ತು. ಇದೇ
ಮನಸ್ಸನ್ನ
ಹಿಮ್ಮೆಟ್ಟಿಸು ಎಂದು ಪರಮಾತ್ಮ ಶ್ರೀ ಕೃಷ್ಣ ಅರ್ಜುನನಿಗೆ
"ಕ್ಷುದ್ರಂ ಹೃದಯ ದೌರ್ಬಲ್ಯಂ ತಕ್ತೋವಿಷ್ಠಃ ಪರಂತಪ"ಎಂದು ಹೇಡಿಯಾಗಬೇಡ ಎದ್ದು ಯುದ್ಧ
ಮಾಡು ಎಂದು ತಿದ್ದಿ ಬುದ್ಧಿ ಹೇಳುತ್ತಾನೆ.
ಅಲ್ಲಿಗೆ ಅರ್ಜುನನ ಮುಂದಿರೋ ಸವಾಲು ಮುಗಿಯಲಿಲ್ಲ,ಆದರೆ
ಭೀಷ್ಮನ ಕೊಲ್ಲುವಾಗ ಇದ್ದ ಹಿಂಜರಿಕೆ, ದ್ರೋಣನ ಸಾವಿನ ನಂತರ ಉಂಟಾದ ಉನ್ಮಾದ, ಜಯದ್ರಥನ ಮೇಲೆ ಉಕ್ಕಿದ
ಅತೀ ಕ್ರೋಧ, ಕರ್ಣನ ಕೊಂದಾದ ಮೇಲೆ ಉಂಟಾದ ನಿರ್ಲಿಪ್ತತೆ ಇವೆಲ್ಲವನ್ನು ಹಿಮ್ಮೆಟ್ಟಿಸಲು ಅದು ಶಕ್ತಿ
ನೀಡಿದ್ದಂತೂ ನಿಜ. ಅದೇ ಶಕ್ತಿಯನ್ನು ಭಗವದ್ಗೀತೆ ನಿಮಗೆ ನೀಡಲಿದೆ.
ಇನ್ನು ಮತ್ತೊಂದು "Withdrawal
syndrome"
ಯಾವುದೋ ಘಳಿಗೆಯಲ್ಲಿ ನೀವು ಕಲಿತ ಚಟಗಳಿಗೆ ಬಲಿಪಶುವಾಗಿರುತ್ತೀರಾ,ಅದಿಲ್ಲದೇ
ಆಸ್ಪತ್ರೆಯಲ್ಲಿ ಒದ್ದಾಡುತ್ತೀರ!
ಆದರೆ ಗಟ್ಟಿಯಾಗಬೇಕಾದದ್ದು ನಿಮ್ಮ ಕರ್ತವ್ಯ,ಕೊರೋನಾದಿಂದೇನೋ
ತಪ್ಪಿಸಿಕೊಳ್ಳುವಿದಿ ಇದೇ ಖಾಯಿಲೆ ಮುಂದೆ ಅಲ್ಜೈಮರ್ ಗೆ ಕಾರಣವಾದರೆ ಆಗ ನಿಮ್ಮನ್ನು ಸಲಹುವವರು ಯಾರು?
ಯುವಕರಲ್ಲಿ ಸಾಮಾನ್ಯವಾದ ಹಸ್ತಮೈಥುನ್ಯವು ಅವರಿಗೆ ಗಂಭೀರ
ಸಮಸ್ಯೆ ಎನಿಸಿದಾಗ ಅದು ಕೇವಲ ಒಂದು ಗೀಳಷ್ಟೇ ನಿಮ್ಮ ಆಸಕ್ತಿಯನ್ನು ಬದಲಾಯಿಸಿಕೊಳ್ಳಿ ಎಂದು ಮನೋವೈದ್ಯರು
ಹೇಳುತ್ತಾರೆ.ಇಲ್ಲಿ ಕೂಡ ಹಾಗೆಯೇ; ಆಸಕ್ತಿ ಬದಲಾಯಿಹಿಕೊಳ್ಳಿ ಮೊದಮೊದಲು ಕಷ್ಟವಾದರೂ ಅದರಿಂದ ಆರಾಮಾಗಿ
ಹೊರಬರಬಹುದು"
ಆಗ ಚಟಗಾರರಿಗೆ ಹಿಂಡಿಹಿಪ್ಪೆ ಮಾಡುವ ಈ ಖಾಯಿಲೆ ನಿಮ್ಮ ಮನಸಿಂದ ದೂರವಾಗಬಹುದು,ಬದುಕು ಎರಡನೇ ಅವಕಾಶಕೊಡುತ್ತಿದೆ,ಸಂಪೂರ್ಣವಾಗಿ ಅದನ್ನು ಜೀವಿಸಿ,ಈ ಹೋರಾಟದಲ್ಲಿ ಗೆದ್ದು ಬಂದಾಗ ನಿಮ್ಮ ಕುಟುಂಬ ನಿಮಗಾಗಿ ಕಾದಿರುತ್ತದೆ ರೋಗದ ಜೊತೆ ವ್ಯಸನಗಳನ್ನೂ,ಮನೋದ್ವೇಗವನ್ನೂ ಆಸ್ಪತ್ರೆಯಲ್ಲಿಯೇ ಕಳಚಿಬಂದು ಮೃತ್ಯುಂಜಯರಾಗಿರಿ!
ಮತ್ತೆ ಹ್ಞಾಂ!ಮೃತ್ಯುಂಜಯಿ ಎಂದರೆ ಸಾವಿರದವನು ಎನ್ನುವುದಕ್ಕಿಂತ
ಸಾವಿನ ಕೊನೆ ಘಳಿಗೆ ತನಕ ಜೀವವನ್ನ ನೆಮ್ಮದಿಯಿಂದ ಆನಂದಿಸಿದವನು ಎನ್ನುವುದು ಹೆಚ್ಚು ಸೂಕ್ತ!
ಮುಂಡಗೋಡ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು